ದೆಹಲಿಯಲ್ಲಿ ಮತ್ತೆ 1 ವಾರ ಲಾಕ್​​​ಡೌನ್​​ ವಿಸ್ತರಣೆ, ಕೆಲವು ಉದ್ಯಮಗಳಿಗೆ ವಿನಾಯಿತಿ

ದೆಹಲಿಯಲ್ಲಿ ಮತ್ತೆ 1 ವಾರ ಲಾಕ್​​​ಡೌನ್​​ ವಿಸ್ತರಣೆ, ಕೆಲವು ಉದ್ಯಮಗಳಿಗೆ ವಿನಾಯಿತಿ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಲಾಕ್​ಡೌನ್​​ ಮಾಡಿದ ಹಿನ್ನೆಲೆ ಕೊರೊನಾ ಪ್ರಕರಣಗಳು ಇಳಿಮುಖವಾಗಿದ್ರಿಂದ ಮತ್ತೊಂದು ವಾರ ಲಾಕ್​ಡೌನ್ ವಿಸ್ತರಿಸಲಾಗಿದೆ. ಈಗಾಗಲೇ ವಿಧಿಸಿರುವ ಲಾಕ್​ಡೌನ್ ಅವಧಿ ನಾಳೆಗೆ ಮುಕ್ತಾಯವಾಗಲಿದೆ. ಹೀಗಾಗಿ ಮತ್ತೆ ಜೂನ್ 1 ರಿಂದ 7ರವರೆಗೂ ದೆಹಲಿಯಲ್ಲಿ ಲಾಕ್​ಡೌನ್ ಮುಂದುವರೆಯಲಿದೆ.

ಕನ್ಸ್​​ಟ್ರಕ್ಷನ್ ಮತ್ತು ಉತ್ಪಾದಕ ಕಂಪನಿಗಳಿಗೆ ಮಾತ್ರ ಲಾಕ್​ಡೌನ್​ ಸಡಿಲಿಕೆ ಮಾಡಲಾಗಿದೆ. ಈ ಕಂಪನಿಗಳು ಕಟ್ಟುನಿಟ್ಟಾಗಿ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನ ಪಾಲಿಸಿ ಕಾರ್ಯನಿರ್ವಹಿಸಬಹುದಾಗಿದೆ. ಹಾಗೇ ಅಧಿಕಾರಿಗಳು ಱಂಡಮ್ ಆಗಿ ಕೆಲವು ಕೆಲಸಗಾರರನ್ನ ಕೊರೊನಾ ಟೆಸ್ಟ್​​ಗೆ ಒಳಪಡಿಸಲಿದ್ದಾರೆ ಎಂದು ಹೇಳಲಾಗಿದೆ.

ಇನ್ನು ಗೋವಾ, ಕೇರಳದಲ್ಲೂ ಕೂಡ ಜೂನ್ 7ರವರೆಗೆ ಲಾಕ್​ಡೌನ್ ವಿಸ್ತರಣೆಯಾಗಿದೆ. ಈ ಅವಧಿಯಲ್ಲಿ ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲಾ ಚಟುವಟಿಕೆಗಳು ಬಂದ್ ಇರಲಿದೆ.

The post ದೆಹಲಿಯಲ್ಲಿ ಮತ್ತೆ 1 ವಾರ ಲಾಕ್​​​ಡೌನ್​​ ವಿಸ್ತರಣೆ, ಕೆಲವು ಉದ್ಯಮಗಳಿಗೆ ವಿನಾಯಿತಿ appeared first on News First Kannada.

Source: newsfirstlive.com

Source link