ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಲೇ ಇರುವ ಕಾರಣ ಮತ್ತೊಂದು ವಾರ ಲಾಕ್​ಡೌನ್ ವಿಸ್ತರಣೆ ಮಾಡಲಾಗಿದೆ.

ಇಂದು ಮಧ್ಯಾಹ್ನ ಈ ಬಗ್ಗೆ ಘೋಷಿಸಿದ ಸಿಎಂ ಅರವಿಂದ ಕೇಜ್ರಿವಾಲ್, ನಗರದಲ್ಲಿ ಕೊರೊನಾವೈರಸ್​ ಅಬ್ಬರ ಮುಂದುವರೆದಿದೆ. ಲಾಕ್​ಡೌನ್ ಹೆಚ್ಚಾಗಬೇಕೆಂಬುದು ಸಾರ್ವಜನಿಕರ ಅಭಿಪ್ರಾಯ. ಹೀಗಾಗಿ ಮತ್ತೊಂದು ವಾರ ಲಾಕ್​ಡೌನ್ ವಿಸ್ತರಣೆ ಮಾಡಲಾಗ್ತಿದೆ ಎಂದರು. ದೆಹಲಿಯಲ್ಲಿ ಕೊರೊನಾ ಪಾಸಿಟಿವಿಟಿ ಪ್ರಮಾಣ ಶೇಕಡ 36 ರಿಂದ 37ರಷ್ಟಿದೆ. ಈ ಹಿಂದೆ ಹೀಗಿರಲಿಲ್ಲ ಎಂದು ಕೇಜ್ರಿವಾಲ್ ತಿಳಿಸಿದ್ರು.

ಕಳೆದ ವಾರ ಕೇಜ್ರಿವಾಲ್ 6 ದಿನಗಳ ಲಾಕ್​ಡೌನ್ ಘೋಷಿಸಿದ್ದರು. ಅದರಂತೆ ಸೋಮವಾರ ಅಂದ್ರೆ ನಾಳೆ ಬೆಳಗ್ಗೆ 6ಕ್ಕೆ ಲಾಕ್​ಡೌನ್ ಮುಕ್ತಾಯಬಾಗಬೇಕಿತ್ತು. ನಿನ್ನೆ ದೆಹಲಿಯಲ್ಲಿ 24,000ಕ್ಕೂ ಹೆಚ್ಚು ಹೊಸ ಕೋವಿಡ್​ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ 357 ಸೋಂಕಿತರು ಸಾವನ್ನಪ್ಪಿದ್ದಾರೆ. ಇದು ಒಂದೇ ದಿನದಲ್ಲಿ ವರದಿಯಾಗಿರೋ ಅತೀ ಹೆಚ್ಚು ಸಾವಿನ ಸಂಖ್ಯೆ. ಹೀಗಾಗಿ ಲಾಕ್​ಡೌನ್ ವಿಸ್ತರಣೆಗೊಂಡಿದೆ.

 

The post ದೆಹಲಿಯಲ್ಲಿ ಮತ್ತೊಂದು ವಾರ ಲಾಕ್​ಡೌನ್ ವಿಸ್ತರಿಸಿ ಆದೇಶ appeared first on News First Kannada.

Source: News First Kannada
Read More