ಹೈಕಮಾಂಡ್​​ ಭೇಟಿಗೆ ತೆರಳಿರುವ ಸಿಎಂ ಬಿಎಸ್ ಯಡಿಯೂರಪ್ಪ ಅವರ ಆಪ್ತ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ.. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರನ್ನು ಭೇಟಿಯಾದರು.

ಭೇಟಿ ಬಳಿಕ ಟ್ವೀಟ್ ಮಾಡಿರುವ ರೇಣುಕಾಚಾರ್ಯ.. ಸಹದ್ಯೋಗಿ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿಟಿ ರವಿ ಅವರನ್ನ ದೆಹಲಿಯ ಕಚೇರಿಯಲ್ಲಿ ಭೇಟಿಯಾದೆ. ಈ ವೇಳೆ ನನ್ನ ಜೊತೆ ಕೋಲಾರ ಎಂಪಿ ಮುನಿಸ್ವಾಮಿ ಕೂಡ ಸಾಥ್ ನೀಡಿದರು. ಸಿಟಿ ರವಿ ಅವರೊಂದಿಗೆ ಪಕ್ಷ ಸಂಘಟನೆ ಬಗ್ಗೆ ಸುದೀರ್ಘವಾಗಿ ಚರ್ಚೆ ಮಾಡಲಾಯಿತು ಅಂತಾ ಮಾಹಿತಿ ನೀಡಿದರು.

ಬಿಎಸ್​ವೈ ಅವರ ಆಪ್ತರಲ್ಲಿ ಒಬ್ಬರಾಗಿರುವ ಎಂಪಿ ರೇಣುಕಾಚಾರ್ಯ, ಯಡಿಯೂರಪ್ಪ ಅವರನ್ನ ಸಿಎಂ ಹುದ್ದೆಯಿಂದ ಕೆಳಗಿಳಿಸೋದನ್ನ ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಇದೀಗ ರಾಜ್ಯ ಬಿಜೆಪಿಯಲ್ಲಿ ಒಂದಿಷ್ಟು ಚಟವಟಿಕೆಗಳು ಗರಿಗೆದರಿವೆ. ಈ ಮಧ್ಯೆ ರೇಣುಕಚಾರ್ಯ ದೆಹಲಿ ಪ್ರವಾಸ ಬೆಳೆಸಿರೋದು ತೀವ್ರ ಕುತೂಹಲ ಮೂಡಿಸಿದೆ.

The post ದೆಹಲಿಯಲ್ಲಿ ರೇಣುಕಾಚಾರ್ಯ ಪಾಲಿಟಿಕಲ್ ಟಾಕ್ಸ್​; ಸಿಟಿ ರವಿ ಭೇಟಿಯಾಗಿ ಚರ್ಚಿಸಿದ್ದೇನು? appeared first on News First Kannada.

Source: newsfirstlive.com

Source link