ನವದೆಹಲಿ: ಲಾಕ್​ಡೌನ್ ಯಶಸ್ವಿಯಾಗಿದ್ದು, ದೆಹಲಿಯಲ್ಲಿ ಕೊರೊನಾ ಎರಡನೇ ಅಲೆ ಕಡಿಮೆಯಾಗಿದೆ ಅಂತ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಇಂದು ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಕೇಜ್ರಿವಾಲ್, ದೆಹಲಿಯಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗ್ತಿದೆ, ಹಾಗೇ ಸೋಂಕಿನ ಎರಡನೇ ಅಲೆ ತಗ್ಗುತ್ತಿದೆ. ನಿಮ್ಮ ಸಹಕಾರದೊಂದಿಗೆ ಲಾಕ್​ಡೌನ್ ಯಶಸ್ವಿಯಾಗಿದೆ ಎಂದರು. ಇನ್ನು ಕಳೆದ ಕೆಲ ದಿನಗಳಿಂದ ಸರ್ಕಾರ ಆಕ್ಸಿಜನ್ ಬೆಡ್​ಗಳ ಸಂಖ್ಯೆಯನ್ನ ಹೆಚ್ಚಿಸಿರೋದ್ರಿಂದ ಸದ್ಯಕ್ಕೆ ದೆಹಲಿಯಲ್ಲಿ ಐಸಿಯು ಹಾಗೂ ಆಕ್ಸಿಜನ್ ಬೆಡ್​ಗಳ ಕೊರತೆ ಇಲ್ಲ. ನಿನ್ನೆ ನಾವು ಜಿಟಿಬಿ ಆಸ್ಪತ್ರೆಯಲ್ಲಿ 500 ಐಸಿಯು ಬೆಡ್​​​ಗಳ ವ್ಯವಸ್ಥೆ ಮಾಡಿದ್ದೇವೆ ಎಂದು ತಿಳಿಸಿದ್ರು.

ಇದನ್ನೂ ಓದಿ: ಕೋವ್ಯಾಕ್ಸಿನ್ ಉತ್ಪಾದಿಸಲು ಮುಂಬೈನ ಹ್ಯಾಫ್​ಕೈನ್​ ಬಯೋ ಫಾರ್ಮಾಗೆ ಕೇಂದ್ರದ ಅನುಮತಿ

ಇದೇ ವೇಳೆ ಲಸಿಕೆ ವಿತರಣೆ ಕುರಿತು ಮಾತನಾಡಿದ ಅವರು, ಪ್ರಸ್ತುತ ನಾವು ಪ್ರತಿದಿನ 1.25 ಲಕ್ಷ ಡೋಸ್​​ ಲಸಿಕೆ ನೀಡುತ್ತಿದ್ದೇವೆ. ಶೀಘ್ರದಲ್ಲೇ ಪ್ರತಿದಿನ 3 ಲಕ್ಷ ಜನರಿಗೆ ಲಸಿಕೆ ಹಾಕಲು ಪ್ರಾರಂಭಿಸುತ್ತೇವೆ. ಮುಂದಿನ 3 ತಿಂಗಳಲ್ಲಿ ದೆಹಲಿಯ ಎಲ್ಲಾ ನಿವಾಸಿಗಳಿಗೆ ಲಸಿಕೆ ಹಾಕುವ ಗುರಿ ಹೊಂದಿದ್ದೇವೆ. ಆದರೆ ಲಸಿಕೆ ಕೊರತೆಯನ್ನು ಎದುರಿಸುತ್ತಿದ್ದೇವೆ. ಕೆಲವು ದಿನಗಳಿಗೆ ಸಾಕಾಗುವಷ್ಟು ಸ್ಟಾಕ್‌ ಮಾತ್ರ ಈಗ ನಮ್ಮ ಬಳಿ ಉಳಿದಿದೆ. ಸದ್ಯ ದೇಶದಲ್ಲಿ ಎರಡು ಸಂಸ್ಥೆಗಳು(ಸೀರಮ್​ ಇನ್ಸ್​​ಟಿಟ್ಯೂಟ್​, ಭಾರತ್​ ಬಯೋಟೆಕ್) ಮಾತ್ರ ಲಸಿಕೆ ಉತ್ಪಾದನೆ ಮಾಡ್ತಿವೆ. ಹೀಗಾಗಿ ಕೇಂದ್ರ ಸರ್ಕಾರ ಈ ಕಂಪನಿಗಳಿಂದ ಲಸಿಕೆಯ ಫಾರ್ಮುಲಾ ಪಡೆದು, ಸುರಕ್ಷಿತವಾಗಿ ವ್ಯಾಕ್ಸಿನ್ ಉತ್ಪಾದಿಸಬಲ್ಲ ಇತರೆ ಕಂಪನಿಗಳಿಗೆ ನೀಡಿ, ಲಸಿಕೆ ಉತ್ಪಾದನಾ ಸಾಮರ್ಥ್ಯವನ್ನ ಹೆಚ್ಚಿಸಬೇಕು ಎಂದು ಸಲಹೆ ನೀಡಿದ್ರು.

ಇದನ್ನೂ ಓದಿ: ಕೊವ್ಯಾಕ್ಸಿನ್ ಉತ್ಪಾದನೆ ಹೆಚ್ಚಿಸಲು ಮುಂದಾದ ಕೇಂದ್ರ; ಬೆಂಗಳೂರು ಘಟಕಕ್ಕೆ ₹65 ಕೋಟಿ ಅನುದಾನ 

ಅಂದ್ಹಾಗೆ ಕೇಂದ್ರ ಸರ್ಕಾರ ಈಗಾಗಲೇ ಲಸಿಕೆ ಉತ್ಪಾದನೆ ಹೆಚ್ಚಿಸಲು ಕೆಲವು ಕ್ರಮಗಳನ್ನ ಕೈಗೊಂಡಿದೆ. ಸ್ವದೇಶಿ ಲಸಿಕೆ ಕೋವ್ಯಾಕ್ಸಿನ್​​ ಉತ್ಪಾದನೆ ಮಾಡಲು ಮುಂಬೈನ ಹ್ಯಾಫ್​ಕೈನ್ ಬಯೋ ಫಾರ್ಮಾ ಸಂಸ್ಥೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಮಹಾರಾಷ್ಟ್ರ ರಾಜ್ಯ ಸರ್ಕಾರದ ಅಡಿಯಲ್ಲಿರುವ ರಾಜ್ಯ ಪಿಎಸ್ಇ ಆದ ಬಯೋಮೆಡಿಕಲ್ ಸಂಸ್ಥೆ ಹ್ಯಾಫ್​ಕೈನ್ ಇನ್ಸ್​​ಟಿಟ್ಯೂಟ್,​​ ಭಾರತ್​ ಬಯೋಟೆಕ್​​ನಿಂದ ಟೆಕ್ನಾಲಜಿ ಟ್ರಾನ್ಸ್​ಫರ್(ತಂತ್ರಜ್ಞಾನ ವರ್ಗಾವಣೆ)​​ಗೆ ಕೇಂದ್ರದ ಅನುಮತಿ ಕೇಳಿತ್ತು. ಕಳೆದ ತಿಂಗಳು ಹ್ಯಾಫ್​​​​​ಕೈನ್ ಸಂಸ್ಥೆಗೆ ಒಂದು ವರ್ಷಕ್ಕೆ ಕೋವ್ಯಾಕ್ಸಿನ್ ಲಸಿಕೆ ಉತ್ಪಾದಿಸಲು ಅನುಮತಿ ಸಿಕ್ಕಿದೆ.

 

The post ದೆಹಲಿಯಲ್ಲಿ ಲಾಕ್​ಡೌನ್ ಯಶಸ್ವಿ, ಕೊರೊನಾ 2ನೇ ಅಲೆ ತಗ್ಗಿದೆ -ಕೇಜ್ರಿವಾಲ್ appeared first on News First Kannada.

Source: newsfirstlive.com

Source link