ನವದೆಹಲಿ: ದೆಹಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಆಕ್ಸಿಜನ್ ಕೊರತೆಯಿಂದ ಹಲವು ಸೋಂಕಿತರು ಸಾವನಪ್ಪುತ್ತಿದ್ದಾರೆ. ಅಲ್ಲದೆ ಆ್ಯಂಬುಲೆನ್ಸ್​ಗಳ ಬೇಡಿಕೆ ಕೂಡ ಹೆಚ್ಚಾಗಿದೆ. ಈ ಹಿನ್ನೆಲೆ ಉಚಿತ ಆಟೋ ಆ್ಯಂಬುಲೆನ್ಸ್ ಸೇವೆ ನೀಡಲಾಗ್ತಿದೆ.

ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ TYCIA ಫೌಂಡೇಶನ್ ಸಹಯೋಗದೊಂದಿಗೆ ಆಟೋರಿಕ್ಷಾ ಆಂಬುಲೆನ್ಸ್‌ ಸೇವೆಗೆ ಮೊನ್ನೆ ಚಾಲನೆ ನೀಡಿದ್ದಾರೆ. ಜನರನ್ನ ಆಸ್ಪತ್ರೆಗೆ ತಲುಪಿಸಲು ಈ ಆಟೋಗಳು ನೆರವಾಗಲಿದೆ. ಇಂದಿನಿಂದ 20 ಹೆಚ್ಚುವರಿ ಆಟೋ ರಿಕ್ಷಾ ಸೇವೆ ಪ್ರಾರಂಭಿಸಲಾಗುವುದು ಅಂತ ಸಂಜಯ್ ಸಿಂಗ್ ಮಾಹಿತಿ ನೀಡಿದ್ದಾರೆ.

ಪ್ರಾಥಮಿಕ ಕೊರೊನಾ ಲಕ್ಷಣವಿದ್ದು, ಆಕ್ಸಿಜನ್ ಸಪೋರ್ಟ್​ ಬೇಕಿರುವ ಸೋಂಕಿತರು ಆಸ್ಪತ್ರೆಗೆ ತಲುಪಲು ಈ ರಿಕ್ಷಾಗಳನ್ನ ಬಳಕೆ ಮಾಡಬಹುದು. ಈ ಆಂಬುಲೆನ್ಸ್‌ಗಳಲ್ಲಿ ಆಕ್ಸಿಜನ್ ಸಿಲಿಂಡರ್ ಮತ್ತು ಸ್ಯಾನಿಟೈಸರ್ ಅಳವಡಿಸಲಾಗಿದೆ. ಆಟೋ ಆಂಬುಲೆನ್ಸ್ ಸೇವೆ ಪಡೆಯಲು ಎರಡು ಹೆಲ್ಪ್​​ಲೈನ್​ಗಳನ್ನೂ ಕೂಡ ತೆರೆಯಲಾಗಿದೆ.

The post ದೆಹಲಿಯಲ್ಲಿ ಸೋಂಕಿತರಿಗಾಗಿ, ಅಕ್ಸಿಜನ್ ವ್ಯವಸ್ಥೆ ಸಹಿತ ಉಚಿತ ಆಟೋ ಆ್ಯಂಬುಲೆನ್ಸ್‌ ಸೇವೆ appeared first on News First Kannada.

Source: newsfirstlive.com

Source link