ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರನ್ನು ಬಂಧಿಸಲು ಇಡಿ ಮುಂದಾಗಿದೆ, ಏಜೆನ್ಸಿಗಳಿಗೆ ಸ್ವಾಗತ: ಅರವಿಂದ ಕೇಜ್ರಿವಾಲ್ | ED is about to arrest our Health Minister Satyendar Jain says Delhi CM Arvind Kejriwal


ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರನ್ನು ಬಂಧಿಸಲು ಇಡಿ ಮುಂದಾಗಿದೆ, ಏಜೆನ್ಸಿಗಳಿಗೆ ಸ್ವಾಗತ: ಅರವಿಂದ ಕೇಜ್ರಿವಾಲ್

ಅರವಿಂದ ಕೇಜ್ರಿವಾಲ್

ದೆಹಲಿ: ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ (Satyendra Jain) ಅವರನ್ನು ಜಾರಿ ನಿರ್ದೇಶನಾಲಯ (Enforcement Directorate) ಬಂಧಿಸುವ ಸಾಧ್ಯತೆ ಇದೆ ಎಂದು ಮೂಲಗಳ ಮೂಲಕ ತಿಳಿದು ಬಂದಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಭಾನುವಾರ ಹೇಳಿದ್ದಾರೆ. ಪಂಜಾಬ್‌ನಲ್ಲಿ ಚುನಾವಣೆಗೆ ಮುನ್ನವೇ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರನ್ನು ಇಡಿ ಬಂಧಿಸಲಿದೆ ಎಂದು ನಮ್ಮ ಮೂಲಗಳ ಮೂಲಕ ನಾವು ತಿಳಿದುಕೊಂಡಿದ್ದೇವೆ. ಅವರು ಈ ಹಿಂದೆ ಎರಡು ಬಾರಿ ಸತ್ಯೇಂದ್ರ ಜೈನ್ ಮೇಲೆ ದಾಳಿ ಮಾಡಿದ್ದಾರೆ ಮತ್ತು ಬರಿಗೈಯಲ್ಲಿ ಮರಳಿದ್ದಾರೆ” ಎಂದು ಕೇಜ್ರಿವಾಲ್ ಹೇಳಿದರು. ನಾವು ಹೆದರುವುದಿಲ್ಲ. ನಾನು ಸೇರಿದಂತೆ ಸಂಸ್ಥೆಗಳು ಯಾರನ್ನು ಬೇಕಾದರೂ ಬಂಧಿಸಬಹುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. “ಮೋದಿ ಸರ್ಕಾರವು ಪಂಜಾಬ್ ಚುನಾವಣೆಗೆ ಮುಂಚೆಯೇ ನಮ್ಮ ಸಚಿವ ಸತ್ಯೇಂದ್ರ ಜೈನ್ ಅವರನ್ನು ಬಂಧಿಸಲು ಯೋಚಿಸುತ್ತಿದೆ. ನಾವು ಅವರನ್ನು ಸ್ವಾಗತಿಸುತ್ತೇವೆ, ಅವರು ಇಡಿ, ಸಿಬಿಐ ಇತ್ಯಾದಿಗಳನ್ನು ಕಳುಹಿಸಬಹುದು ಮತ್ತು ನನ್ನನ್ನೂ ಒಳಗೊಂಡಂತೆ ಅವರು ಬಯಸುವ ಯಾರನ್ನಾದರೂ ಬಂಧಿಸಬಹುದು. ನಾವು ಯಾವುದೇ ತಪ್ಪು ಮಾಡಿಲ್ಲವಾದ್ದರಿಂದ ನಾವು ಹೆದರುವುದಿಲ್ಲ. ನಾವು ಚನ್ನೀ ಜೀಯಂತೆ ಅಳುವುದಿಲ್ಲ ಎಂದು  ಕೇಜ್ರಿವಾಲ್ ಹೇಳಿಕೆಯನ್ನು ಉಲ್ಲೇಖಿಸಿ ಎಎಪಿ ಟ್ವೀಟ್ ಮಾಡಿದೆ.

ದೆಹಲಿಯ ಇತರ ಸುದ್ದಿಗಳು

ಗಣರಾಜ್ಯೋತ್ಸವ 2022 ರ ರಿಹರ್ಸಲ್ ಪರೇಡ್‌ನಿಂದ ಭಾನುವಾರ ಕೆಲವು ಸ್ಥಳಗಳಲ್ಲಿ ದೆಹಲಿಯ ಸಂಚಾರ ದಟ್ಟಣೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ದೆಹಲಿ ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ. ಪೂರ್ವಾಭ್ಯಾಸದ ಕಾರಣ, ಇಂದು ಸಂಜೆ 6 ರಿಂದ ವಿಜಯ್ ಚೌಕ್‌ನಿಂದ ಇಂಡಿಯಾ ಗೇಟ್‌ಗೆ, ರಾಜ್‌ಪಥ್‌ನಲ್ಲಿ ರಾತ್ರಿ 11 ರಿಂದ ಯಾವುದೇ ಸಂಚಾರವನ್ನು ಅನುಮತಿಸಲಾಗುವುದಿಲ್ಲ ಮತ್ತು ‘ಸಿ’-ಹೆಕ್ಸಾಗನ್- ಇಂಡಿಯಾ ಗೇಟ್ ರಾತ್ರಿ 9:15 ರಿಂದ ಮುಚ್ಚಿರುತ್ತದೆ. “ಪರೇಡ್ ಪೂರ್ವಾಭ್ಯಾಸವು ವಿಜಯ್ ಚೌಕ್‌ನಿಂದ ಬೆಳಿಗ್ಗೆ 10:20 ಕ್ಕೆ ಪ್ರಾರಂಭವಾಗುತ್ತದೆ ಮತ್ತು ರಾಷ್ಟ್ರೀಯ ಕ್ರೀಡಾಂಗಣಕ್ಕೆ ಮುಂದುವರಿಯುತ್ತದೆ” ಎಂದು ಸಲಹೆಗಾರರು ಹೇಳಿದರು.

ಏತನ್ಮಧ್ಯೆ, ದೆಹಲಿ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ ಅವರು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ವಾರಾಂತ್ಯದ ಕರ್ಫ್ಯೂ ಹಿಂತೆಗೆದುಕೊಳ್ಳುವಂತೆ ಮತ್ತು ಮಾರುಕಟ್ಟೆಗಳಲ್ಲಿನ ನಿರ್ಬಂಧಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಅಲ್ಲಿ ಬೆಸ-ಸಮ ನಿಯಮ ಪ್ರಸ್ತುತ ಅಂಗಡಿಗಳಿಗೆ ಜಾರಿಯಲ್ಲಿದೆ. ವಾರಾಂತ್ಯದ ಕರ್ಫ್ಯೂ ಅನ್ನು ತೆಗೆದುಹಾಕುವ ಸರ್ಕಾರದ ಪ್ರಸ್ತಾವನೆಯನ್ನು ಬೈಜಾಲ್ ಶುಕ್ರವಾರ ತಿರಸ್ಕರಿಸಿದ್ದರು.ಆದಾಗ್ಯೂ, ಅವರು ಖಾಸಗಿ ಕಚೇರಿಗಳನ್ನು ಶೇಕಡಾ 50 ರಷ್ಟು ಸಾಮರ್ಥ್ಯದೊಂದಿಗೆ ಪುನಃ ತೆರೆಯಲು ಅವಕಾಶ ಮಾಡಿಕೊಟ್ಟರು.

TV9 Kannada


Leave a Reply

Your email address will not be published. Required fields are marked *