ದೆಹಲಿಯ ಪ್ರತಿಷ್ಠಿತ ಬಡಾವಣೆಯಲ್ಲಿ ವ್ಯಕ್ತಿಯ ಕಗ್ಗೊಲೆ; ಕ್ಯಾಮೆರಾದಲ್ಲಿ ಕೃತ್ಯ ಸೆರೆ | Murder caught on camera youth stabbed multiple times in South Delhi’s posh Malviya Nagar locality


ಮಯಾಂಕ್ ಮತ್ತು ಆತನ ಗೆಳೆಯರನ್ನು ಇನ್ನೊಂದು ತಂಡ ಅಟ್ಟಾಡಿಸಿದ್ದು ಜನನಿಬಿಡ ಮಾರುಕಟ್ಟೆಯಲ್ಲಿ ಮಯಾಂಕ್ ನ್ನು ಹತ್ಯೆ ಮಾಡಿದೆ.ಈ ಹತ್ಯೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ…

ದೆಹಲಿಯ ಪ್ರತಿಷ್ಠಿತ ಬಡಾವಣೆಯಲ್ಲಿ ವ್ಯಕ್ತಿಯ ಕಗ್ಗೊಲೆ; ಕ್ಯಾಮೆರಾದಲ್ಲಿ ಕೃತ್ಯ ಸೆರೆ

ರಸ್ತೆಯಲ್ಲಿ ಜಗಳ

Image Credit source: Twitter

ದಕ್ಷಿಣ ದೆಹಲಿಯ (South Delhi) ಪ್ರತಿಷ್ಠಿತ ಬಡಾವಣೆಯಾದ ಮಾಳವಿಯ ನಗರದಲ್ಲಿ(Malviya Nagar) ಗುರುವಾರ ಯುವನ ಹತ್ಯೆ ನಡೆದಿದ್ದು, ಈ ದುಷ್ಕೃತ್ಯ  ಕ್ಯಾಮೆರಾದಲ್ಲಿ ಸೆರೆಯಾಗಿದೆ. ಜನರ ಗುಂಪೊಂದು 25ರ ಹರೆಯದ ಯುವಕನಿಗೆ ಹಲವಾರು ಬಾರಿ ಇರಿದಿದ್ದು ತೀವ್ರ ಗಾಯಗಳಿಂದ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕೊಲೆಯಾದ ಯುವಕನನ್ನು ಮಯಾಂಕ್ ಪನ್ವಾರ್ ಎಂದು ಗುರುತಿಸಲಾಗಿದೆ. ಇಲ್ಲಿನ ಖಿಲಾಬೇಗಂಪುರ್ ನಲ್ಲಿ ಈತ ಗೆಳೆಯರೊಂದಿದೆ ಮದ್ಯ ಸೇವಿಸುತ್ತಿದ್ದ. ಆ ಹೊತ್ತಲ್ಲಿ ಇನ್ನೊಂದು ಯುವಕರ ಗುಂಪಿನೊಂದಿಗೆ ಜಗಳ ನಡೆದಿದೆ. ಮಯಾಂಕ್ ಮತ್ತು ಆತನ ಗೆಳೆಯರನ್ನು ಇನ್ನೊಂದು ತಂಡ ಅಟ್ಟಾಡಿಸಿದ್ದು ಜನನಿಬಿಡ ಮಾರುಕಟ್ಟೆಯಲ್ಲಿ ಮಯಾಂಕ್ ನ್ನು ಹತ್ಯೆ ಮಾಡಿದೆ.ಈ ಹತ್ಯೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ  ವ್ಯಾಪಕವಾಗಿ ಶೇರ್ ಆಗುತ್ತಿದ್ದು ಬಿಳಿ ಮತ್ತು ನೀಲಿ ಟೀ ಶರ್ಟ್ ಧರಿಸಿದ ಮಯಾಂಕ್ ನ್ನು ಮೂರು ಮಂದಿ ಅಟ್ಟಾಡಿಸಿ ಬಂದು ಹಲವು ಬಾರಿ ಇರಿದು ಕೊಲೆ ಮಾಡುತ್ತಿರುವುದು ಕಾಣುತ್ತದೆ. ಆ ರಸ್ತೆ ಮೂಲಕ ಹಾದು ಹೋಗುತ್ತಿದ್ದ ಕೆಲವರು ಇದನ್ನು ನೋಡಿ ದಂಗಾಗಿದ್ದು, ಇನ್ನು ಕೆಲವರು ಸಹಾಯಕ್ಕಾಗಿ ಧಾವಿಸುತ್ತಿರುವುದು ವಿಡಿಯೊದಲ್ಲಿದೆ.

ಇಂಥದ್ದೇ ಘಟನೆ ದೆಹಲಿಯಲ್ಲಿ ಗುರುವಾರ ನಡೆದಿದ್ದು, ಇದು ಎರಡನೆಯದ್ದು. ದೆಹಲಿಯ ವಾಜಿರಾಬಾದ್ ಪ್ರದೇಶದಲ್ಲಿ ಸುಮಾರು 10 ಮಂದಿಯ ಗುಂಪೊಂದು ಹದಿಹರೆಯದ ಬಾಲಕ ಮತ್ತು ವ್ಯಕ್ತಿಯ ಮೇಲೆ ಮಧ್ಯರಾತ್ರಿ ದಾಳಿ ನಡೆಸಿತ್ತು. ಮಾಧ್ಯಮಗಳ ವರದಿ ಪ್ರಕಾರ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ . ಎಫ್ಐಆಐರ್ ಬಗ್ಗೆ ಮತ್ತು ಐಪಿಸಿ ಯಾವ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂಬುದರ ಬಗ್ಗೆ ಮಾಹಿತಿ ಈವರೆಗೆ ಲಭ್ಯವಾಗಿಲ್ಲ.

TV9 Kannada


Leave a Reply

Your email address will not be published. Required fields are marked *