ನವದೆಹಲಿ:  ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ಸೋಂಕು ದಿನೇ ದಿನೇ ಹೆಚ್ಚಳವಾಗ್ತಿರೋ ಹಿನ್ನೆಲೆ, 500 ಹಾಸಿಗೆಗಳ ಕೋವಿಡ್ ಸೆಂಟರ್ ತೆರೆಯಲು ತೀರ್ಮಾನ ಮಾಡಲಾಗಿದೆ. ಇದಕ್ಕಾಗಿ ಈಗಾಗಲೇ  ದೆಹಲಿಯ ರಾಮಲೀಲಾ ಮೈದಾನದಲ್ಲಿ ಕೆಲಸ ಭರದಿಂದ ಸಾಗಿದೆ.

ಮೇ 10ರ ಒಳಗಾಗಿ ಈ ಕೋವಿಡ್ ಸೆಂಟರ್ ಬಳಕೆಗೆ ಸಿದ್ಧವಿರಲಿದೆ. ಇಡೀ ರಾಮಲಿಲಾ ಮೈದಾನದುದ್ದಕ್ಕೂ ದೊಡ್ಡ ದೊಡ್ಡ ಶೆಡ್​ಗಳ ನಿರ್ಮಾಣ ಕಾರ್ಯ ಆರಂಭವಾಗಿದೆ. ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗ್ತಿರೋದು ದೆಹಲಿ ಸರ್ಕಾರಕ್ಕೆ ತಲೆ ಬಿಸಿ ತಂದಿದೆ. ಮೇ ತಿಂಗಳಲ್ಲಿ ಸೋಂಕು ಮತ್ತಷ್ಟು ವಿಕೋಪಕ್ಕೆ ಹೋಗಬಹುದು ಅಂತ ಅಂದಾಜಿಸಲಾಗಿದೆ.

ಈ ಹಿನ್ನಲೆಯಲ್ಲಿ ರಾಮಲಿಲಾ ಮೈದಾನದಲ್ಲಿ 500 ಐಸಿಯು ಹಾಸಿಗಳುಳ್ಳ ಕೋವಿಡ್​ ಸೆಂಟರ್ ಆರಂಭಕ್ಕೆ ಭರದ ಸಿದ್ಧತೆ ನಡೆದಿದೆ.

The post ದೆಹಲಿಯ ರಾಮ್​ಲೀಲಾ ಮೈದಾನದಲ್ಲಿ 500 ಹಾಸಿಗೆಗಳ ಕೋವಿಡ್ ಸೆಂಟರ್ ನಿರ್ಮಾಣ appeared first on News First Kannada.

Source: newsfirstlive.com

Source link