ಸುಪ್ರೀಂಕೋರ್ಟ್
ದೆಹಲಿ: ಹನುಮ ಜಯಂತಿಯಂದು ನಡೆದ ಹಿಂಸಾಚಾರದಿಂದ ತತ್ತರಿಸಿರುವ ವಾಯುವ್ಯ ದೆಹಲಿಯ ಜಹಾಂಗೀರ್‌ಪುರಿಯಲ್ಲಿ (Jahangirpuri) ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ನಡೆಸುತ್ತಿರುವ ಧ್ವಂಸ ಕಾರ್ಯಾಚರಣೆಯನ್ನು ನಿಲ್ಲಿಸಿ ಸುಪ್ರೀಂಕೋರ್ಟ್ (Supreme Court) ಬುಧವಾರ ಯಥಾಸ್ಥಿತಿಗೆ (status quo)ಆದೇಶಿಸಿದೆ. ಹಿರಿಯ ವಕೀಲರಾದ ದುಷ್ಯಂತ್ ದವೆ, ಕಪಿಲ್ ಸಿಬಲ್, ಪಿವಿ ಸುರೇಂದ್ರನಾಥ್ ಮತ್ತು ಪ್ರಶಾಂತ್ ಭೂಷಣ್ ಅವರು ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರ ಮುಂದೆ ಈ ವಿಷಯ ಪ್ರಸ್ತಾಪಿಸಿದರು. ಗಲಭೆ ಪೀಡಿತ ಜಹಾಂಗೀರ್‌ಪುರಿಯಲ್ಲಿ ಧ್ವಂಸಗೊಳಿಸುವ ಕಾರ್ಯಾಚರಣೆ ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ ಮತ್ತು ಯಾರಿಗೂ ನೋಟಿಸ್ ನೀಡಿಲ್ಲ ಎಂದು ದುಶ್ಯಂತ್ ದವೆ ಉಲ್ಲೇಖಿಸಿದ್ದರಿಂದ, ಸಿಜೆಐ ಯಥಾಸ್ಥಿತಿಗೆ ಆದೇಶಿಸಿದ್ದಾರೆ. “ಇತರ ವಿಷಯದ ಜೊತೆಗೆ ವಿಷಯವನ್ನು ನಾಳೆ ತೆಗೆದುಕೊಳ್ಳಲಿ” ಎಂದು ಸಿಜೆಐ ಹೇಳಿದರು.ಮಧ್ಯಪ್ರದೇಶದ ಖರಗೋನ್ನಲ್ಲಿ ನಡೆದ ಗಲಭೆ-ಆರೋಪಿಗಳ ಆಸ್ತಿಗಳನ್ನು ಧ್ವಂಸಗೊಳಿಸಲು ಬುಲ್ಡೋಜರ್‌ಗಳನ್ನು ಬಳಸುವುದರ ವಿರುದ್ಧ ಜಮೀಯತ್ ಉಲಾಮಾ-ಇ-ಹಿಂದ್ ಸಲ್ಲಿಸಿದ ಮನವಿಯಲ್ಲಿಯೂ ಜಹಾಂಗೀರ್‌ಪುರಿ ಧ್ವಂಸ ಅಭಿಯಾನದ ವಿಷಯವನ್ನು ಉಲ್ಲೇಖಿಸಲಾಗಿದೆ. ಜಹಾಂಗೀರ್‌ಪುರಿ ಧ್ವಂಸವು ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾಗಬೇಕಿತ್ತು ಆದರೆ ಈ ವಿಷಯವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಸ್ತಾಪಿಸಬೇಕಾಗಿರುವುದರಿಂದ, ಕಾರ್ಯಾಟರಣೆ 9 ಗಂಟೆಗೆ ಪ್ರಾರಂಭವಾಯಿತು ಎಂದು ದವೆ ಹೇಳಿದರು.
ಜಹಾಂಗೀರ್‌ಪುರಿ ಧ್ವಂಸ ಪ್ರಕರಣವನ್ನು ದೆಹಲಿ ಹೈಕೋರ್ಟ್‌ನಲ್ಲಿ ಉಲ್ಲೇಖಿಸಲಾಗಿದೆ. ನಿವಾಸಿಗಳಿಗೆ ಪೂರ್ವ ಸೂಚನೆ ನೀಡಲಾಗಿಲ್ಲ. ಅವರಲ್ಲಿ ಹಲವರಿಗೆ ಮನೆಯಲ್ಲಿಯೂ ಇಲ್ಲ ಎಂದು ವಕೀಲರು ಹೇಳಿದ್ದಾರೆ. ದೆಹಲಿ ಹೈಕೋರ್ಟ್‌ನಲ್ಲಿ ವಕೀಲರು ಧ್ವಂಸ ಕಾರ್ಯಾಚರಣೆಯನ್ನು ಮಧ್ಯಾಹ್ನ 2 ಗಂಟೆಯವರೆಗೆ ನಿಲ್ಲಿಸುವಂತೆ ಕೋರಿದ್ದಾರೆ. ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಂಘಿ ಮತ್ತು ನ್ಯಾಯಮೂರ್ತಿ ನವೀನ್ ಚಾವ್ಲಾ ಅವರ ಪೀಠವು ಇಂದೇ ವಿಷಯದ ಪಟ್ಟಿಗೆ ಅನುಮತಿ ನೀಡಿದೆ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಅವರಿಗೆ ಸೂಚನೆಗಳೊಂದಿಗೆ ಸಿದ್ಧರಾಗುವಂತೆ ಕೇಳಿದೆ. ಇದು ಸಾರ್ವಜನಿಕ ಭೂಮಿಯನ್ನು ಅತಿಕ್ರಮಣವಾಗಿದ್ದರೆ ಇದು ಕಾನೂನುಬಾಹಿರವೇ ಎಂದು ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಕೇಳಿತು. ಸಂಬಂಧಿಸಿದ ಪ್ರದೇಶವು ಅಧಿಸೂಚಿತ ‘ಜುಗ್ಗಿ ಕ್ಲಸ್ಟರ್’ ಆಗಿದೆಯೇ ಎಂದು ದೆಹಲಿ ಹೈಕೋರ್ಟ್ ಪೀಠವು ಕೇಳಿದೆ.
(ಹೆಚ್ಚಿನ ಮಾಹಿತಿ ಅಪ್ಡೇಟ್ ಆಗಲಿದೆ)