ನವದೆಹಲಿ: ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಕೊರೊನಾ ವೈರಸ್ ಕಫ್ರ್ಯೂವನ್ನು ವಿಸ್ತರಿಸಿದ್ದು, ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಅನಾವಶ್ಯಕ ಓಡಾಟವನ್ನು ಜೂನ್ 7ರ ಬೆಳಗ್ಗೆ 5 ಗಂಟೆಯವರೆಗೂ ನಿಷೇಧಿಸಲಾಗಿದೆ.

ಕೈಗಾರಿಕಾ ಪ್ರದೇಶಗಳ ಉತ್ಪಾದನಾ ಘಟಕಗಳಲ್ಲಿ ಕಾರ್ಯಾಚರಣೆ ನಡೆಸಲು ಮತ್ತು ನಿರ್ಮಾಣ ಕೆಲಸ ಮಾಡಲು ಕಫ್ರ್ಯೂ ವೇಳೆ ಅನುಮತಿ ನೀಡಲಾಗಿದೆ ಎಂದು ಡಿಡಿಎಂಎ ಆದೇಶದಲ್ಲಿ ತಿಳಿಸಲಾಗಿದೆ.

ಕೊರೊನಾ ವೈರಸ್ ಸಾಂಕ್ರಮಿಕ ರೋಗವನ್ನು ನಿಯಂತ್ರಿಸಲು ಕೇರಳ ಸರ್ಕಾರ ಕೂಡ ಜೂನ್ 9ರವರೆಗೆ ರಾಜ್ಯವ್ಯಾಪಿ ಲಾಕ್‍ಡೌನ್‍ನನ್ನು ಒಂದು ವಾರ ವಿಸ್ತರಿಸಿದೆ. ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಉಳಿದ ಎಲ್ಲ ಸೇವೆಗಳು ಸ್ಥಗಿತವಾಗಲಿದೆ.

ಈ ಕುರಿತಂತೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‍ರವರು, ರಾಜ್ಯದಲ್ಲಿ ಕೊರೊನಾ ವೈರಸ್ ಹರಡುವಿಕೆ ಕ್ಷೀಣಿಸುತ್ತಿದ್ದರೂ, ನಿರ್ಬಧಗಳನ್ನು ತೆಗೆದುಹಾಕುವ ಹಂತಕ್ಕೆ ನಾವಿನ್ನು ತಲುಪಿಲ್ಲ. ಮೇ 31ರಿಂದ ಜೂನ್ 9ರವರೆಗೆ ಎಲ್ಲಾ ಜಿಲ್ಲೆಗಳಲ್ಲಿ ಲಾಕ್‍ಡೌನ್ ಮುಂದುವರೆಯುತ್ತದೆ ಎಂದು ತಿಳಿಸಿದ್ದಾರೆ. ಇದನ್ನು ಓದಿ:ಅಮೇಥಿಗೆ 10,000 ಮೆಡಿಕಲ್ ಕಿಟ್ ಕಳುಹಿಸಿಕೊಟ್ಟ ರಾಹುಲ್ ಗಾಂಧಿ

The post ದೆಹಲಿ, ಕೇರಳದಲ್ಲಿ ಲಾಕ್‍ಡೌನ್ ವಿಸ್ತರಣೆ appeared first on Public TV.

Source: publictv.in

Source link