ಬೆಂಗಳೂರು: ಕರ್ನಾಟಕದ 30 ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ ಸಿಎಂ ಆಗಿ ಯಶಸ್ವಿ 100 ದಿನಗಳನ್ನು ಪೂರೈಸಿದ್ದಾರೆ. ಆದರೆ ಅವರು ಈ ನೂರು ದಿನಗಳ್ಲಿ ಬರೋಬ್ಬರಿ 6 ಬಾರಿ ದೆಹಲಿ ಪ್ರವಾಸ ಕೈಗೊಂಡಿರೋದು ಅನೇಕ ಪ್ರಶ್ನೆಗಳು ಹುಟ್ಟಿಕೊಳ್ಳಲು ಕಾರಣವಾಗಿದೆ.
ಅಷ್ಟೇ ಅಲ್ಲದೆ ಸಿಎಂ ಬೊಮ್ಮಾಯಿ ನಿನ್ನೆ ಕೂಡ ರಾಷ್ಟ್ರ ರಾಜಧಾನಿಗೆ ಹಾರಿದ್ದಾರೆ. ಪ್ರತಿ ಬಾರಿ ಸಿಎಂ ದೆಹಲಿಗೆ ಹೋರಟಾಗ ಅವರ ಜೊತೆ ಸಚಿವರಾದ ಕೆ. ಸುಧಾಕರ್ ಮತ್ತು ಗೋವಿಂದ ಕಾರಜೋಳ ಕಾರಜೋಳ ಇರುತ್ತಿದ್ದರು. ಆದರೆ ಈ ಬಾರಿ ಬೊಮ್ಮಾಯಿ ಅವರು ಒಂಟಿಯಾಗಿ ದೆಹಲಿಗೆ ಪ್ರಯಾಣ ಬೆಳೆಸಿದ್ದು ರಾಜಕೀಯ ಪಡಸಾಲೆಯಲ್ಲಿ ಸಾಕಷ್ಟು ಪಿಸುಮಾತುಗಳಿಗೆ ಕಾರಣವಾಗಿದೆ.
ಇದನ್ನೂ ಓದಿ:ಸಿಎಂ ಗಾದಿವರೆಗೆ ಬಂದು ನಿಂತ ‘ಬಿಟ್’ ಅಸ್ತ್ರ; ‘ಕೈ’ಗೆ ದಾಖಲೆಗಳು ಸಿಕ್ಕರೆ ಅದು ಬ್ರಹ್ಮಾಸ್ತ್ರ..!
ಒಂಟಿಯಾದ್ರಾ ಬೊಮ್ಮಾಯಿ.?
ಹೌದು ಪ್ರತಿ ಸಲ ಪ್ರವಾಸದಲ್ಲಿ ಸಿಎಂ ಜೊತೆಗೆ ಇರ್ತಿದ್ದ ಆಪ್ತರು ಈ ಬಾರಿ ಗೈರಾಗಿದ್ದಾರೆ. ಸಾಕಷ್ಟು ಸವಾಲಿನ ನಡುವೆಯೇ ಸಿಎಂ ಈ ಬಾರಿ ದೆಹಲಿಗೆ ಪ್ರಯಾಣ ಬೆಳಸಿದ್ದಾರೆ. ಇಂತಹ ಸಮಯದಲ್ಲಿ ಜೊತೆಗೆ ಇರಬೇಕಾಗಿದ್ದ ಆಪ್ತರು ಪ್ರವಾಸದಿಂದ ಅಂತರ ಕಾಯ್ದುಕೊಂಡಿದ್ದಾರೆ. ಪ್ರವಾಸ ಅಷ್ಟೇ ಅಲ್ಲ ಪ್ರತಿ ಕಾರ್ಯಕ್ರಮದಲ್ಲೂ ಸಿಎಂ ಜೊತೆ ಇರ್ತಿದ್ದ ಸಚಿವರು ಬೈ ಎಲೆಕ್ಷನ್ ಸೋಲಿನ ಬಳಿಕ ಯಾಕೋ ದೂರ ದೂರ ಅಂತಿದ್ದಾರೆ.
ಇನ್ನು ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಬಿಟ್ ಕಾಯಿನ್ ಕೇಸ್ಗೆ ಸಂಬಧಿಸಿದಂತೆ ಆಡಳಿತ ಪಕ್ಷದ ಕೆಲ ನಾಯಕರ ಮೇಲೆ ಆರೋಪ ಕೇಳಿ ಬರ್ತಿದೆ. ಹೀಗಾಗಿ ಇದು ಸಿಎಂಗೆ ಅಷ್ಟೇ ಸಂಬಂಧಿಸಿದ ವಿಷಯ ಅಂತ ಸಚಿವರು ಅಂತರ ಕಾಯ್ದುಕೊಂಡರಾ? ಅಥವಾ ಸಿಎಂ ಬಸವರಾಜ ಬೊಮ್ಮಾಯಿಗೆ ಮಾತ್ರವೇ ಹೈಕಮಾಂಡ್ ಬುಲಾವ್ ನೀಡಿತ್ತಾ ಎಂಬುದಾಗಿ ಚಿತ್ರ ವಿಚಿತ್ರ ಪಿಸುಮಾತಿನ ಪಾರಿವಾಳಗಳು ಅಲ್ಲಲ್ಲಿ ಕೇಳಿ ಬರುತ್ತಿವೆ.
ಇದನ್ನೂ ಓದಿ:ದೆಹಲಿ ಪ್ರವಾಸದ ಸೀಕ್ರೆಟ್; ಸಿಎಂ ಬೊಮ್ಮಾಯಿಗೆ ಪ್ರಧಾನಿ ಮೋದಿಯೇ ಬುಲಾವ್ ಕೊಟ್ರಾ..?