ಬೆಂಗಳೂರ: ಬೊಮ್ಮಾಯಿ ಸಿಂಹಾಸನಕ್ಕೆ ಏರಿದ ಬಳಿಕ 6 ಬಾರಿ ದೆಹಲಿ ದಂಡಯಾತ್ರೆ ಮಾಡಿದ್ದಾರೆ. ಆದ್ರೆ, ಈ ಹಿಂದಿನ ಯಾತ್ರೆಗೂ ಈ ಬಾರಿಯ ಪ್ರವಾಸಕ್ಕೂ ಅಜಗಜಾಂತರವಿದೆ. ಹೈಕಮಾಂಡ್ ಕರೆದಿಲ್ಲ, ಅಧ್ಯಕ್ಷರು ದೆಹಲಿಯಲ್ಲಿಲ್ಲ. ಉಳಿದಿಬ್ಬರು ಬೆಂಗಳೂರಲ್ಲೇ ಇದ್ದರು. ಜಿಎಸ್ಟಿ ಸಭೆ ಇಲ್ಲ. ಆದ್ರೂ ಸಿಎಂ ಕರೆಯದೇ ಹೋಗಿದ್ಯಾಕೆ ಅನ್ನೋದು ನಿಗೂಢ ರಹಸ್ಯ.
ಕುತೂಹಲ ಕೆರಳಿಸಿದ ಸಿಎಂ ಬೊಮ್ಮಾಯಿ 6ನೇ ದೆಹಲಿ ಪ್ರವಾಸ
ಸಿಎಂ ಬೊಮ್ಮಾಯಿ ಕರೆಸಿಕೊಂಡಿದ್ದು ಮೋದಿನಾ, ಚಾಣಾಕ್ಯನಾ?
ಬೊಮ್ಮಾಯಿ ಸಿಂಹಾಸನಕ್ಕೆ ಏರಿದ ಬಳಿಕ 6 ಬಾರಿ ದೆಹಲಿ ದಂಡಯಾತ್ರೆ ಮಾಡಿದ್ದಾರೆ. ದೆಹಲಿಯಲ್ಲಿ ಪ್ರಧಾನಿ ಮೋದಿ ಸೇರಿದಂತೆ ಹಲವು ನಾಯಕರ ಭೇಟಿಗೂ ಸಮಯ ಕೇಳಿದ್ದಾರೆ. ಇದ್ರ ನಡುವೆ ಸಿಎಂ ಯಾಕೆ ದೆಹಲಿಗೆ ಹೋಗಿದ್ದು ಅನ್ನೋ ಕುತೂಹಲವಂತೂ ಇದ್ದೇ ಇದೆ.
ಸಿಎಂ ಬೊಮ್ಮಾಯಿಯ ಈ ಹಿಂದಿನ ದೆಹಲಿ ಯಾತ್ರೆಗೂ ಈ ಬಾರಿಯ ಪ್ರವಾಸಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಯಾಕಂದ್ರೆ ಈ ಬಾರಿ ಹೈಕಮಾಂಡ್ ಕರೆದಿಲ್ಲ, ದೆಹಲಿಯಲ್ಲಿ ಹೇಳಿಕೊಳವಳುವ ಕೆಲಸವೇನೂ ಇಲ್ಲ. ಅಭೆಗಳಂತೂ ಇಲ್ಲವೇ ಇಲ್ಲ. ಹೀಗಿದ್ರೂ ಸಿಎಂ ಕರೆಯದೇ ಹೋಗಿದ್ಯಾಕೆ ಅನ್ನೋದು ನಿಗೂಢ ರಹಸ್ಯವಾಗಿದೆ… ಆದ್ರೆ ಸಿಎಂ ಪ್ರವಾಸದ ಕೆಲ ಮಾಹಿತಿ ನ್ಯೂಸ್‌ಫಸ್ಟ್‌ಗೆ ಸಿಕ್ಕಿದೆ.
ಸಿಎಂ ದೆಹಲಿ ಸೀಕ್ರೆಟ್!
ಬೆಳಗ್ಗೆ ದೆಹಲಿ ಪ್ರವಾಸ ಕೈಗೊಂಡಿರುವ ಸಿಎಂ ಬೊಮ್ಮಾಯಿಗೆ ಈವರೆಗೂ ಹೈಕಮಾಂಡ್ ಸಮಯಾವಕಾಶ ಕೊಟ್ಟಿಲ್ಲ. ಇನ್ನು 2 ದಿನಗಳಿಂದ ರಾಜ್ಯದಲ್ಲಿದ್ದ ಬಿಜೆಪಿಯ ಇಬ್ಬರು ಪ್ರಭಾವಿಗಳಾದ ಬಿ.ಎಲ್. ಸಂತೋಷ್, ಅರುಣ್ ಸಿಂಗ್, ರಾಜ್ಯದಲ್ಲಿನ ಬೆಳವಣಿಗೆ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ. ಇದ್ರ ನಡುವೆ ದೆಹಲಿಗೆ ಹೋಗಿರುವ ಸಿಎಂಗೆ ಫಲಿತಾಂಶ ಬಗ್ಗೆ ಚರ್ಚಿಸಲು ಹೈಕಮಾಂಡ್ ಬುಲಾವ್ ನೀಡಿಲ್ಲ. ಸದ್ಯಕ್ಕಂತೂ ಸಂಪುಟ ವಿಸ್ತರಣೆ, ಪುನಾರಚನೆ ಪ್ರಸ್ತಾವ ಇಲ್ಲ. ನಿಗಮ ಮಂಡಳಿಗಳ ಮರು ನೇಮಕದ ಬಗ್ಗೆಯೂ ಚರ್ಚೆ ಇಲ್ಲ. ದೆಹಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಕೂಡಾ ಇಲ್ಲ.
ಹೀಗಿದ್ರೂ ಸಿಎಂ ದಿಢೀರ್ ಅಂತ ದೆಹಲಿಗೆ ಹೋಗಿದ್ದಾರೆ. ಹೀಗಾಗಿ ಸಿಎಂ ದೆಹಲಿ ಯಾತ್ರೆ ಸುತ್ತಾ ಕುತೂಹಲ ಹೆಚ್ಚಾಗಿದೆ. ಎಲ್ಲಿ ಮಹತ್ವದ ವಿಚಾರವೊಂದರ ಬಗ್ಗೆ ಪ್ರಧಾನಿ ಮೋದಿ ಸಿಎಂಗೆ ಬುಲಾವ್ ಕೊಟ್ರಾ ಅನ್ನೋ ಅನುಮಾನ ಕೂಡ ಕಾಡ್ತಿದೆ. ಇನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಗೌಪ್ಯ ಚರ್ಚೆಗೆನಾದ್ರೂ ಬೊಮ್ಮಾಯಿಯವರನ್ನ ಆಹ್ವಾನಿಸಿದ್ರಾ ಅನ್ನೋ ಪ್ರಶ್ನೆ ಕೂಡ ರಾಜ್ಯ ನಾಯಕರಲ್ಲಿ ಕಾಡ್ತಿದೆ.
ಒಟ್ನಲ್ಲಿ ಅದೇನೇ ಇರಲಿ, ಸಿಎಂ ದಿಢೀರ್ ಅಂತ ದೆಹಲಿಗೆ ಹಾರಿಬಿಟ್ಟಿದ್ದಾರೆ. ಪ್ರತೀ ಬಾರಿಯೂ ಸಿಎಂ ದೆಹಲಿಗೆ ಹೋಗುವಾಗ ಹಲವು ಕಾರಣಗಳಿರುತ್ತಿದ್ವು. ಆದ್ರೆ ಈ ಬಾರಿಯ ಭೇಟಿಗೆ ಅಂತಹ ಮಹತ್ವದ ಕಾರಣಗಳು ಇಲ್ಲದಿದ್ರೂ ಸಿಎಂ ದೆಹಲಿ ಯಾತ್ರೆ ಕೈಗೊಂಡಿರೋದು ಸಾಕಷ್ಟೂ ಕುತೂಹಲಕ್ಕೆ ಕಾರಣವಾಗಿರೋದಂತೂ ಸತ್ಯ.
ವಿಶೇಷ ವರದಿ: ಮಧುಸೂದನ್, ಪೊಲಿಟಿಕಲ್ ಬ್ಯೂರೋ