ದೆಹಲಿ: ವ್ಯಾಗನ್‌ಆರ್‌ಗೆ ಡಿಕ್ಕಿ ಹೊಡೆದು ಫ್ಲೈಓವರ್‌ನ ಕೆಳಗೆ ಮಲಗಿದ್ದವರ ಮೇಲೆ ಉರುಳಿ ಬಿದ್ದ ಬಿಎಂಡಬ್ಲ್ಯು; ಇಬ್ಬರು ಮಕ್ಕಳು ಸಾವು | South Delhi Sleeping on footpath two children dead in accident involving BMW WagonR


ದೆಹಲಿ: ವ್ಯಾಗನ್‌ಆರ್‌ಗೆ ಡಿಕ್ಕಿ ಹೊಡೆದು ಫ್ಲೈಓವರ್‌ನ ಕೆಳಗೆ ಮಲಗಿದ್ದವರ ಮೇಲೆ ಉರುಳಿ ಬಿದ್ದ ಬಿಎಂಡಬ್ಲ್ಯು; ಇಬ್ಬರು ಮಕ್ಕಳು ಸಾವು

ಅಪಘಾತಕ್ಕೀಡಾದ ಕಾರು

ಮುಂಜಾನೆ 4.30ರ ಸುಮಾರಿಗೆ ತಮಗೆ ಪಿಸಿಆರ್ ಕರೆ ಬಂದಿದೆ.ಕಪ್ಪು ಬಣ್ಣದ ಬಿಎಂಡಬ್ಲ್ಯು ವ್ಯಾಗನ್‌ಆರ್‌ಗೆ ಡಿಕ್ಕಿ ಹೊಡೆದು ನಂತರ ಫ್ಲೈಓವರ್ ಅಡಿಯಲ್ಲಿ ಮಲಗಿದ್ದ ಜನರ ಮೇಲೆ ಪಲ್ಟಿ ಹೊಡೆದಿದೆ. ಅವರನ್ನು ಏಮ್ಸ್ ಟ್ರಾಮಾ ಸೆಂಟರ್‌ಗೆ ಕರೆದೊಯ್ಯಲಾಯಿತು..

ದೆಹಲಿ: ಕಳೆದ ವಾರ ತನ್ನ ಚಿಕ್ಕಪ್ಪನ ಹೊಸ ಬಿಎಂಡಬ್ಲ್ಯು ಕಾರಿನ (BMW) ವೇಗವನ್ನು ಪರೀಕ್ಷಿಸಲು ರೈಡ್‌ಗೆ ಹೊರಟಿದ್ದ 27 ವರ್ಷದ ಉದ್ಯಮಿಯೊಬ್ಬರು ವ್ಯಾಗನ್‌ಆರ್‌ಗೆ (WagonR)ಡಿಕ್ಕಿ ಹೊಡೆಡಿದ್ದು  ದಕ್ಷಿಣ ದೆಹಲಿಯ (South Delhi) ಫ್ಲೈಓವರ್‌ನ ಕೆಳಗೆ ಮಲಗಿದ್ದವರ ಮೇಲೆ ಪಲ್ಟಿಯಾಗಿ ಬಿದ್ದ ಪರಿಣಾಮ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಈ ಅಪಘಾತದಲ್ಲಿ ಮತ್ತು ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.ಜೂನ್ 10 ರಂದು ಲೋಧಿ ರಸ್ತೆಯ ಫ್ಲೈಓವರ್ ನಲ್ಲಿ ಈ ಘಟನೆ ನಡೆದಿದೆ. ವ್ಯಾಗನ್‌ಆರ್‌ನಲ್ಲಿದ್ದವರಿಗೂ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಪರಾರಿಯಾಗಿದ್ದು ಘಟನೆ ನಡೆದ ಕೆಲವು ದಿನಗಳ ನಂತರ ಬಂಧಿಸಲಾಗಿದೆ. ಮುಂಜಾನೆ 4.30ರ ಸುಮಾರಿಗೆ ತಮಗೆ ಪಿಸಿಆರ್ ಕರೆ ಬಂದಿದೆ.ಕಪ್ಪು ಬಣ್ಣದ ಬಿಎಂಡಬ್ಲ್ಯು ವ್ಯಾಗನ್‌ಆರ್‌ಗೆ ಡಿಕ್ಕಿ ಹೊಡೆದು ನಂತರ ಫ್ಲೈಓವರ್ ಅಡಿಯಲ್ಲಿ ಮಲಗಿದ್ದ ಜನರ ಮೇಲೆ ಪಲ್ಟಿ ಹೊಡೆದಿದೆ. ಅವರನ್ನು ಏಮ್ಸ್ ಟ್ರಾಮಾ ಸೆಂಟರ್‌ಗೆ ಕರೆದೊಯ್ಯಲಾಯಿತು, ಅಲ್ಲಿ ಇಬ್ಬರು ಮಕ್ಕಳು  ರೋಶ್ನಿ (6) ಮತ್ತು ಅವಳ ಸಹೋದರ ಅಮೀರ್ (10) ಸಾವನ್ನಪ್ಪಿದ್ದಾರೆ.ಉಳಿದವರಿಗೂ ತೀವ್ರವಾಗಿ ಗಾಯಗಳಾಗಿವೆ ಎಂದು ಡಿಸಿಪಿ (ಆಗ್ನೇಯ) ಇಶಾ ಪಾಂಡೆ ಹೇಳಿದ್ದಾರೆ.

ವ್ಯಾಗನ್‌ಆರ್‌ ಚಾಲಕ ಯತಿನ್ ಶರ್ಮಾ (18) ಪ್ರಕಾರ ಆ ಸಮಯದಲ್ಲಿ ಅವರು ತನ್ನ ಮೂವರು ಸ್ನೇಹಿತರೊಂದಿಗೆ ಇದ್ದರು. “ನಾನು ವಿದ್ಯಾರ್ಥಿ ಮತ್ತು ಪಿಆರ್ ಆಗಿ ಪ್ರವರ್ತಕನಾಗಿ ಕೆಲಸ ಮಾಡುತ್ತೇನೆ. ಇಂದು, ನಾನು ನನ್ನ ಸ್ನೇಹಿತರೊಂದಿಗೆ ಸಾಮ್ರಾಟ್ ಹೋಟೆಲ್‌ನಿಂದ ಸೂರ್ಯ ಹೋಟೆಲ್‌ಗೆ ಚಾಲನೆ ಮಾಡುತ್ತಿದ್ದೆ .ಮುಂಜಾನೆ 4.30 ರ ಸುಮಾರಿಗೆ, ನಾವು ಫ್ಲೈಓವರ್ ಅನ್ನು ದಾಟುತ್ತಿದ್ದಾಗ ಕಪ್ಪು ಕಾರ್ ನಮ್ಮ ಕಾರಿಗೆ ಬಲಭಾಗದಲ್ಲಿ ಡಿಕ್ಕಿ ಹೊಡೆದಿದೆ . ನನ್ನ ಕಾರು ಫ್ಲೈಓವರ್‌ನ ತುದಿಗೆ ಬಂದು ಅಲ್ಲಿಂದ ಕೆಳಗೆ ಬಿದ್ದಿದೆ. ನಾನು ಮತ್ತು ನನ್ನ ಸ್ನೇಹಿತರು ಗಾಯಗೊಂಡಿದ್ದೇವೆ. ಜನರು ನಮಗೆ ಸಹಾಯ ಮಾಡಿದರು ಮತ್ತು ಇತರರು ಕಾರಿನ ಕೆಳಗೆ ಬಿದ್ದಿರುವುದನ್ನು ನೋಡಿದೆ. ಕಾರ್ ಡ್ರೈವರ್ ಮೂಲಚಂದ್ ಕಡೆಯಿಂದ ಹೊರಟುಹೋದರು ಎಂದು ಶರ್ಮಾ ದೂರಿದ್ದಾರೆ.
ಗಾಯಗೊಂಡ ವ್ಯಕ್ತಿಗಳನ್ನು ಹೊರತುಪಡಿಸಿ ಯಾವುದೇ ಪ್ರತ್ಯಕ್ಷದರ್ಶಿಗಳು ಇರಲಿಲ್ಲ, ಅವರು ಕಪ್ಪು ಕಾರಿನ ಬಗ್ಗೆ ಏನನ್ನೂ ನೆನಪಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮೇಲ್ಸೇತುವೆ ಬಳಿ ಇರುವ ಸಿಸಿಟಿವಿ ಕ್ಯಾಮೆರಾಗಳು ಕಾರ್ಯ ನಿರ್ವಹಿಸಿಲ್ಲ. ನಂತರ ನಾವು ಒಬೆರಾಯ್ ಹೋಟೆಲ್, ಲೋಧಿ ರಸ್ತೆ ಮತ್ತು ಬಾರಾಪುಲ್ಲಾ ಬಳಿಯ ಕ್ಯಾಮರಾಗಳನ್ನು ನೋಡಿದೆವು. ಸಿಸಿಟಿವಿ ಮ್ಯಾಪಿಂಗ್ ಬಳಸಿ ಮತ್ತು 120 ಕ್ಕೂ ಹೆಚ್ಚು ಕ್ಯಾಮೆರಾಗಳನ್ನು ಪರಿಶೀಲಿಸಿದ್ದೇವೆ.ಕಾರನ್ನು BMW ಎಂದು ಗುರುತಿಸಲಾಗಿದೆ. ಮಾಲೀಕರನ್ನು ಪತ್ತೆ ಮಾಡಲಾಗಿದ್ದು, ಕಾರು ತನ್ನ ಸೋದರಳಿಯ ಸಾಹಿಲ್ ನಾರಂಗ್ (27) ಬಳಿ ಇತ್ತು ಎಂದು ಅವರು ನಮಗೆ ತಿಳಿಸಿದರು, ಅವರು ನೋಯ್ಡಾದ ವರ್ಕ್‌ಶಾಪ್‌ನಲ್ಲಿ ಸರ್ವೀಸ್ ಗಾಗಿನೀಡಿದ್ದರು. ನಿರ್ಮಾಣ್ ವಿಹಾರ್‌ನಲ್ಲಿರುವ ಅವರ ನಿವಾಸದಿಂದ ಸಾಹಿಲ್ ಅವರನ್ನು ಬಂಧಿಸಲಾಗಿದೆ. ಅಧಿಕೃತ ರಿಪೇರ್ ಸೆಂಟರ್​​ನಿಂದ ಬಿಎಂಡಬ್ಲ್ಯು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಪಾಂಡೆ ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಸಾಹಿಲ್ ವಿಚಾರಣೆಯ ಸಮಯದಲ್ಲಿ ತಾನು ಮತ್ತು ಅವನ ಚಿಕ್ಕಪ್ಪ ವಿಮಾನ ನಿಲ್ದಾಣದಿಂದ ಬರುತ್ತಿದ್ದು ಕಾರನ್ನು ಟೆಸ್ಟ್ ಮಾಡಲು ಬಯಸಿದ್ದೆ ಎಂದು ಹೇಳಿದ್ದಾರೆ. ಆ ವಾಹನವನ್ನು ಹೊಸದಾಗಿ ಖರೀದಿಸಲಾಗಿದೆ. ಸಾಹಿಲ್ ಕಾರಿನ ವೇಗ ಮತ್ತು ನಿಯಂತ್ರಣವನ್ನು ಪರೀಕ್ಷಿಸುತ್ತಿದ್ದರು ಮತ್ತು ಅವರು ವ್ಯಾಗನ್ ಆರ್ ಗೆ ಢಿಕ್ಕಿ ಹೊಡೆದಿದೆ ಎಂದು ಡಿಸಿಪಿ ಹೇಳಿದರು.

ಸಾಹಿಲ್ ವಿರುದ್ಧ ಅತಿವೇಗದ ಚಾಲನೆ ಮತ್ತು ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅವರು ಇತ್ತೀಚೆಗೆ ಪದವಿ ಪೂರ್ಣಗೊಳಿಸಿದ್ದಾರೆ ಮತ್ತು ನೋಯ್ಡಾದಲ್ಲಿ ಗಾರ್ಮೆಂಟ್ ವ್ಯಾಪಾರ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

TV9 Kannada


Leave a Reply

Your email address will not be published.