ದೆಹಲಿ ಶ್ರದ್ಧಾ ಕೊಲೆ ಪ್ರಕರಣ: ಹಂತಕ ಅಫ್ತಾಬ್​ ಬಾಯ್ಬಿಟ್ಟ ಕ್ರೂರ ಸತ್ಯಕ್ಕೆ ಬೆಚ್ಚಿಬಿದ್ದ ಪೊಲೀಸ್ – delhi shraddha murder case exclusive details revealed by accused afthab during investigation


ಶ್ರದ್ಧಾ ಕೊಲೆ ಮಾಡುವ ವಾರದ ಹಿಂದೆಯೇ ಆಕೆಯನ್ನು ಮುಗಿಸಲು ಅಫ್ತಾಬ್ ಪ್ಲಾನ್ ಮಾಡಿಕೊಂಡಿದ್ದ. ಅಫ್ತಾಬ್ ಪ್ರತಿದಿನ ಫ್ರಿಡ್ಜ್ ತೆರೆದು ಗಂಟೆಗಟ್ಟಲೆ ಶ್ರದ್ಧಾ ಮುಖವನ್ನೇ ದಿಟ್ಟಿಸುತ್ತಿದ್ದನಂತೆ. ದೇಹವನ್ನು ತುಂಡರಿಸಿದ ಬಳಿಕ ಪ್ರತಿದಿನ ಶ್ರದ್ಧಾ ಮುಖ ನೋಡುತ್ತಿದ್ದನಂತೆ.

ದೆಹಲಿ ಶ್ರದ್ಧಾ ಕೊಲೆ ಪ್ರಕರಣ: ಹಂತಕ ಅಫ್ತಾಬ್​ ಬಾಯ್ಬಿಟ್ಟ ಕ್ರೂರ ಸತ್ಯಕ್ಕೆ ಬೆಚ್ಚಿಬಿದ್ದ ಪೊಲೀಸ್

ಅಫ್ತಾಬ್ ಅಮೀನ್ ಪೂನಾವಾಲಾ- ಶ್ರದ್ಧಾ ವಾಕರ್

ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿರೋ ಶ್ರದ್ಧಾ ವಾಲ್ಕರ್(Shraddha Walker) ಮರ್ಡರ್ ಪ್ರಕರಣ ಇಡೀ ರಾಷ್ಟ್ರವನ್ನೇ ಬೆಚ್ಚಿ ಬೀಳಿಸಿದೆ. ಜೀವನ ಪೂರ್ತಿ ಸಂಗಾತಿಯಾಗಿ ಸುಖ ಜೀವನ ನಡೆಸಲು ಪೋಷಕರಿಂದ ಜಗಳವಾಡಿಕೊಂಡು ದೂರವಾಗಿದ್ದ ಶ್ರದ್ಧಾ ತನ್ನ ಪ್ರಿಯತಮನ ಕೈಯಿಂದಲೇ 35 ತುಂಡುಗಳಾಗಿದ್ದಾಳೆ. ಸದ್ಯ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾನನ್ನು(Aaftab Ameen Poonawala) ಪೊಲೀಸರು ಬಂಧಿಸಿ ಶ್ರದ್ಧಾಳ ಮೃತದೇಹದ ತುಂಡುಗಳನ್ನ ಎಸೆದ ಅರಣ್ಯ ಪ್ರದೇಶಕ್ಕೆಲ್ಲ ಕರೆದುಕೊಂಡು ಹೋಗಿ ಮಹಜರು ಮಾಡಿಸಿದ್ದಾರೆ. ಇದರ ನಡುವೆ ಹಂತಕ ಹಾಗೂ ಈ ಪ್ರಕರಣದ ಬಗೆಗಿನ ಇಂಟರೆಸ್ಟಿಂಗ್ ಸಂಗತಿಗಳು ಬಯಲಾಗಿವೆ.

ದೆಹಲಿಯಲ್ಲಿ 6 ತಿಂಗಳ ಹಿಂದೆ ನಡೆದ ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣವನ್ನ ದೆಹಲಿ ಪೊಲೀಸರು ಬೇಧಿಸಿದ್ದಾರೆ. ಆರೋಪಿ ಅರೆಸ್ಟ್ ಬಳಿಕ ಬೆಚ್ಚಿಬೀಳಿಸುವ ಅನೇಕ ಸಂಗತಿಗಳು ಬಯಲಾಗುತ್ತಿವೆ. ಅಪ್ತಾಬ್ ಎಂಬ ಹಂತಕನ ಮೆಂಟಾಲಿಟಿ ನೋಡಿದ್ರೆ ಎಂತವರಿಗೂ ಶಾಕ್ ಆಗುತ್ತೆ. ಈತ ತನ್ನ ಪ್ರೇಯಸಿಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್​ಗೆ ತುಂಬಿಸಿದರೂ ಕೊಂಚವೂ ಭಯವಿಲ್ಲದೆ ಮತ್ತೊಬ್ಬ ಯುವತಿಯ ಜೊತೆ ತನ್ನ ರೂಮಿನಲ್ಲೇ ಸರಸ ಸಲ್ಲಾಪವಾಡುತ್ತಿದ್ದ. ಈಗ ಇವನ ಮತ್ತೊಂದು ಕ್ರೌರ್ಯ ಅನಾವರಣಗೊಂಡಿದೆ. ಅಫ್ತಾಬ್ ಪ್ರತಿದಿನ ಫ್ರಿಡ್ಜ್ ತೆರೆದು ಗಂಟೆಗಟ್ಟಲೆ ಶ್ರದ್ಧಾ ಮುಖವನ್ನೇ ದಿಟ್ಟಿಸುತ್ತಿದ್ದನಂತೆ. ದೇಹವನ್ನು ತುಂಡರಿಸಿದ ಬಳಿಕ ಪ್ರತಿದಿನ ಶ್ರದ್ಧಾ ಮುಖ ನೋಡುತ್ತಿದ್ದನಂತೆ. ಫ್ರಿಡ್ಜ್ ಬಾಗಿಲು ತೆಗೆದು ಪದೆ ಪದೆ ಶ್ರದ್ಧಾ ಮುಖ ನೋಡುತ್ತಿದ್ದ. ಅಷ್ಟೇ ಅಲ್ಲ ಶ್ರದ್ಧಾ ಗುರುತು ಅಳಿಸಲು ದೇಹದ ಭಾಗಗಳನ್ನು ಸುಟ್ಟಿದ್ದಾನೆ. ಮೆಹ್ರೌಲಿ ಮಾರುಕಟ್ಟೆಯಿಂದ ಬ್ಲೋವರ್ ಖರೀದಿಸಿ ಕೈ ಬೆರಳು ಸೇರಿದಂತೆ ಹಲವು ಭಾಗಗಳನ್ನು ಬ್ಲೋವರ್ ನಿಂದ ಸುಟ್ಟು ಹಾಕಿದ್ದಾನೆ. ಕೊನೆಯದಾಗಿ ಶ್ರದ್ಧಾಳ ತಲೆಯನ್ನು ಕಾಡಿಗೆ ಎಸೆದಿದ್ದಾನೆ.

ಶ್ರದ್ಧಾ ಮರ್ಡರ್ ಯಾಕೆ ಮಾಡ್ದೆ? ಹೇಗೆ ಮಾಡ್ದೆ ಅಂತಾ ಬಾಯ್ಬಿಟ್ಟ ಅಫ್ತಾಬ್

ದೆಹಲಿ ಪೊಲೀಸರ ಎದುರು ಅಫ್ತಾಬ್ ಪೂನಾವಾಲಾ ಆಘಾತಕಾರಿ ಅಂಶಗಳನ್ನು ಬಾಯ್ಬಿಟ್ಟಿದ್ದಾನೆ. ಶ್ರದ್ಧಾ ಕೊಲೆ ಮಾಡುವ ವಾರದ ಹಿಂದೆಯೇ ಆಕೆಯನ್ನು ಮುಗಿಸಲು ಅಫ್ತಾಬ್ ಪ್ಲಾನ್ ಮಾಡಿಕೊಂಡಿದ್ದ. “ನನಗೂ ಶ್ರದ್ಧಾಗೂ ತಿಂಗಳಾನುಘಟ್ಟಲೆ ಆಗಾಗ ಜಗಳ ಆಗ್ತಿದ್ದೇ ನಾನು ಅವಳನ್ನು ಕೊಲ್ಲಲು ಕಾರಣ” “ನಾನು ಬೇರೆ ಹುಡುಗಿಯರ ಜೊತೆ ಮಾತಾಡೋದು ಶ್ರದ್ಧಾ ವಾಲ್ಕರ್ ಗೆ ಇಷ್ಟ ಇರದೇ ಜಗಳ ಮಾಡ್ತಿದ್ಳು” “ನಾನು ಬೇರೆ ಹುಡುಗಿಯರೊಂದಿಗೆ ಫೋನ್ ನಲ್ಲಿ ಮಾತಾಡಲು ಶ್ರದ್ಧಾ ಬಿಡ್ತಿರಲಿಲ್ಲ!” “ನಾನು ಬೇರೆ ಹುಡುಗಿಯರೊಂದಿಗೆ ಮಾತಾಡ್ತಿದ್ದನ್ನು ಅನುಮಾನಿಸಿ, ಕೋಪಗೊಳ್ತಿದ್ಳು” – “ಕೊಲೆಯಾದ ಮೇ 18ಕ್ಕಿಂತ ಒಂದು ವಾರದ ಮುನ್ನವೇ ಅವಳನ್ನು ಕೊಲ್ಲಬೇಕಿತ್ತು, ಆದ್ರೆ ಮಿಸ್ ಆಯ್ತು” ಎಂದು ದೆಹಲಿ ಪೊಲೀಸ್ ಅಧಿಕಾರಿಗಳ ಮುಂದೆ ಅಫ್ತಾಬ್ ಪೂನಾವಾಲಾ ಬಾಯ್ಬಿಟ್ಟಿದ್ದಾನೆ. “ಜಗಳ ಮಾಡ್ತಾ ಮಾಡ್ತಾ ಎಮೋಷನ್ ಆದ್ಳು, ಅಳೋದಕ್ಕೆ ಶುರು ಮಾಡಿದ್ಳು..ಅದಕ್ಕೆ ಬಿಟ್ಟಿದ್ದೆ” “ಆದ್ರೆ ಮೇ 18ಕ್ಕೆ ನಾನು ಶ್ರದ್ಧಾ ವಾಲ್ಕರ್ ಪ್ರಾಣ ತೆಗೆದೆ ಅಂತಾ ಒಪ್ಪಿಕೊಂಡಿದ್ದಾನೆ. “ಮೇ 18ರಂದು ಮತ್ತೆ ಜಗಳ ಆಯ್ತು, ಮಾತಿಗೆ ಮಾತು ಬೆಳೆದಿದ್ದರಿಂದ ಶ್ರದ್ಧಾಳ ಕಥೆ ಮುಗಿಸಿದೆ”. ನಾನೇ ಶ್ರದ್ಧಾ ಕೊಲೆ ಮಾಡಿದ್ದು ಎಂದು ತಪ್ಪೊಪ್ಪಿಕೊಂಡಿದ್ದಾನೆಂದು ಟಿವಿ9ಗೆ ನವದೆಹಲಿ ಪೊಲೀಸರ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ.

TV9 Kannada


Leave a Reply

Your email address will not be published.