ದೆಹಲಿ: ಹೋಮ್‌ವರ್ಕ್ ಮಾಡಲಿಲ್ಲ ಎಂಬ ಕಾರಣಕ್ಕೆ ಉರಿ ಬಿಸಿಲಿನಲ್ಲಿ ಮಗಳ ಕೈಕಾಲು ಕಟ್ಟಿಹಾಕಿದ ತಾಯಿ | New Delhi: A mother tied her daughter’s hand in the hot sun for not doing homework


ದೆಹಲಿ: ಹೋಮ್‌ವರ್ಕ್ ಮಾಡಲಿಲ್ಲ ಎಂಬ ಕಾರಣಕ್ಕೆ ಉರಿ ಬಿಸಿಲಿನಲ್ಲಿ ಮಗಳ ಕೈಕಾಲು ಕಟ್ಟಿಹಾಕಿದ ತಾಯಿ

ಉರಿ ಬಿಸಿಲಿನಲ್ಲಿ ನರಳಾಡುತ್ತಿರುವ ಬಾಲಕಿ

ತಾಯಂದಿರು ತಮ್ಮ ಮಕ್ಕಳನ್ನು ಎಷ್ಟು ಮುದ್ದು ಮಾಡುತ್ತಾರೊ, ಮಕ್ಕಳು ಏನಾದರೂ ತಪ್ಪು ಮಾಡಿದಾಗ ಅಷ್ಟೇ ಶಿಕ್ಷಿಸುತ್ತಾರೆ. ಸದ್ಯ ಹೋಮ್​ ವರ್ಕ್ ಮಾಡಿಲ್ಲವೆಂಬ ಕಾರಣಕ್ಕೆ ತಾಯಿ ತನ್ನ ಮಗಳನ್ನು ಉರಿ ಬಿಸಿಲಿನಲ್ಲಿ ಕೈಕಾಲು ಕಟ್ಟಿ ಹಾಕಿರುವ ವಿಡಿಯೋ ವೈರಲ್ ಆಗಿದೆ.

ದೆಹಲಿಯ ಮನೆಯೊಂದರ ಮೇಲೆ ಐದು ವರ್ಷದ ಬಾಲಕಿ ಕೈಕಾಲುಗಳನ್ನು ಕಟ್ಟಿಕೊಂಡು ಸುಡುವ ಬಿಸಿಲಿನಲ್ಲಿ ಕಷ್ಟಪಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದೆಹಲಿ ಪೊಲೀಸರು ನಡೆಸಿದ ಆರಂಭಿಕ ತನಿಖೆಯಲ್ಲಿ ಬಾಲಕಿಯ  ತಾಯಿ ತನ್ನ ಶಾಲೆಯ ಹೋಮ್​ ವರ್ಕ್​ ಮಾಡಿಲ್ಲ ಎನ್ನುವ ಕಾರಣಕ್ಕೆ ಶಿಕ್ಷೆ ವಿಧಿಸಿದ್ದಾಳೆ ಎಂದು ತಿಳಿದುಬಂದಿದೆ. ಮೊದಲಿಗೆ, ವಿಡಿಯೋ ಕರವಾಲ್ ನಗರ ಪ್ರದೇಶದಿಂದ ಹರಿ ಬಿಡಲಾಗಿದೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿತು. ಆದರೆ ಅಲ್ಲಿ ಘಟನೆಗೆ ಸಂಬಂಧಿಸಿದ ಯಾವುದನ್ನೂ ಪೊಲೀಸರು ಪತ್ತೆ ಮಾಡಲಿಲ್ಲ. ನಂತರ, ವಿಡಿಯೋ ತುಕ್ಮೀರ್‌ಪುರದ ಖಜೂರಿ ಖಾಸ್ ಪ್ರದೇಶದು ಎಂದು ತಿಳಿದು ಬಂದಿದ್ದು, ಮನೆಯನ್ನು ಪತ್ತೆಹಚ್ಚಲಾಯಿತು.

TV9 Kannada


Leave a Reply

Your email address will not be published.