
ಹಿಂದೂ ಜನಜಾಗೃತಿ ಸಮಿತಿಯ ಮೋಹನ್ ಗೌಡ
ಕೋಟೆ ವೆಂಕಟರಮಣ ದೇವಸ್ಥಾನ ಜಾಗ ಅತಿಕ್ರಮಣ ಮಾಡಿದ್ದಾರೆ. ಹೀಗಾಗಿ ಟಿಪ್ಪು ಪ್ಯಾಲೆಸ್, ಕೋಟೆ ವೆಂಕಟರಮಣ ದೇಗುಲ ಸರ್ವೆ ಮಾಡಬೇಕು. ಮೂಲ ಮಾಲೀಕರ ಹೆಸರಿಗೆ ನೋಂದಣಿ ಮಾಡಿಸಬೇಕೆಂದು ಒತ್ತಾಯ ಕೇಳಿಬಂದಿದೆ.
ಬೆಂಗಳೂರು: ದೇಗುಲದ (Temple) ಜಾಗ ಅತಿಕ್ರಮಣ ಮಾಡಿ ಟಿಪ್ಪು ಪ್ಯಾಲೆಸ್ (Tipu Palace) ನಿರ್ಮಾಣ ಮಾಡಿರುವ ಆರೋಪ ಕೇಳಿಬಂದಿದ್ದು, ಒತ್ತುವರಿ ತೆರವು ಮಾಡಲು ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸಿದೆ. ಕೋಟೆ ವೆಂಕಟರಮಣ ದೇವಸ್ಥಾನ ಜಾಗ ಅತಿಕ್ರಮಣ ಮಾಡಿದ್ದಾರೆ. ಹೀಗಾಗಿ ಟಿಪ್ಪು ಪ್ಯಾಲೆಸ್, ಕೋಟೆ ವೆಂಕಟರಮಣ ದೇಗುಲ ಸರ್ವೆ ಮಾಡಬೇಕು. ಜೊತೆಗೆ ಮೂಲ ಮಾಲೀಕರ ಹೆಸರಿಗೆ ನೋಂದಣಿ ಮಾಡಿಸಬೇಕೆಂದು ಒತ್ತಾಯ ಕೇಳಿಬಂದಿದೆ. ಈ ಬಗ್ಗೆ ಟಿವಿ9ಗೆ ಹೇಳಿಕೆ ನೀಡಿದೆ ಹಿಂದೂ ಜನಜಾಗೃತಿ ಸಮಿತಿಯ ಮೋಹನ್ ಗೌಡ, ಬೆಂಗಳೂರಿನ ಟಿಪ್ಪು ಪ್ಯಾಲೆಸ್ ಪುರಾತತ್ವ ಇಲಾಖೆ ಅಡಿಯಲ್ಲಿದೆ. ವೆಂಕಟರಮಣಸ್ವಾಮಿ ದೇಗುಲ ಮುಜರಾಯಿ ಇಲಾಖೆಯ ಅಡಿಯಲ್ಲಿದೆ ಎಂದು ತಿಳಿಸಿದರು.
ಜಾಮಿಯಾ ಮಸೀದಿ ಬಗ್ಗೆ ಕುಮಾರಸ್ವಾಮಿ ಮಾತು:
ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ದೇವರು ಕನಸಿನಲ್ಲಿ ಬಂದು ತನ್ನ ಮೂಲ ಸ್ಥಾನವನ್ನು ಹೇಳಿದ್ನಾ? ಅಲ್ಲದೇ ಅದನ್ನ ಸರಿಪಡಿಸಿ ಅಂತಾ ದೇವರು ಏನಾದ್ರೂ ಕೇಳಿತ್ತಾ? ಇದನ್ನ ನೋಡಿದ್ರೆ ಮತ್ತೊಂದು ವಿವಾದ ಶುರುವಾಗುವ ಲಕ್ಷಣ ಇದೆ. ಹಲವು ಹಿಂದೂ ದೇವಾಲಯಗಳಿಗೆ ಟಿಪ್ಪು ಭೂಮಿ ದಾನ ಮಾಡಿದ್ದ. ಆ ಸಮಾಜಕ್ಕೆ ಕನಸ್ಸಿನಲ್ಲಿ ಬರುತ್ತೆ, ಅವರಿಗೆ ಭೂಮಿ ಬಿಟ್ಟುಕೊಡ್ತಿರಾ? ದೇವಾಲಯಗಳಿಗೆ ಟಿಪ್ಪು ಭೂಮಿ ನೀಡಿರುವ ಉದಾಹರಣೆ ಇದೆ. ಮುಸಲ್ಮಾನರು ಬಂದು ಕೇಳಿದ್ರೆ ದೇವಸ್ಥಾನದವನ್ನು ಬಿಟ್ಟುಕೊಡ್ತಿರಾ? ಎಂದು ಪ್ರಶ್ನಿಸಿದ್ದಾರೆ.