ದೇವನಹಳ್ಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿ ಮೇಲೆ ನಾಯಿಗಳ ದಾಳಿ! ಸಿಸಿಟಿವಿಯಲ್ಲಿ ದೃಶ್ಯ ಸೆರೆ | Street Dog attack on 16 year old girl in Devanahalli this video recorded in cctv

ದೇವನಹಳ್ಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿ ಮೇಲೆ ನಾಯಿಗಳ ದಾಳಿ! ಸಿಸಿಟಿವಿಯಲ್ಲಿ ದೃಶ್ಯ ಸೆರೆ

ನಾಯಿಗಳು ಬಾಲಕಿ ಮೇಲೆ ದಾಳಿ ನಡೆಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ

ದೇವನಹಳ್ಳಿ: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿ ಮೇಲೆ ನಾಯಿಗಳು ದಾಳಿ ಮಾಡಿವೆ. ಬಾಲಕಿ ಮೇಲೆ ನಾಯಿಗಳು ಅಟ್ಯಾಕ್ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ಮಾರ್ಕೆಟ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಇಂದು (ಅ.9) ಬೆಳಿಗ್ಗೆ 16 ವರ್ಷದ ಬಾಲಕಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಳು. ಈ ವೇಳೆ 6 ಕ್ಕೂ ಅಧಿಕ ನಾಯಿಗಳು ಏಕಾಏಕಿ ಬಾಲಕಿ ಮೇಲೆ ದಾಳಿ ಮಾಡಿವೆ. ಸ್ಥಳೀಯರ ನೆರವಿನಿಂದ ಅದೃಷ್ಟವಶಾತ್ ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಬಾಲಕಿ ಮೇಕೆ ನಾಯಿಗಳು ಏಕಾಏಕಿ ದಾಳಿ ನಡೆಸಿದ್ದು, ದಾಳಿ ನಡೆಸಿವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಾಯಗೊಂಡ ಬಾಲಕಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾಳೆ. ಬೀದಿ ನಾಯಿಗಳ ದಾಳಿ ಹೆಚ್ಚಾಗುತ್ತಿದೆ ಅಂತ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮರಿಯನ್ನು ರಕ್ಷಿಸಿದ ತಾಯಿ ನಾಯಿ
ರಾಯಚೂರು ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ನಗರದಲ್ಲಿ 100ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಚರಂಡಿ ನೀರು ಮನೆಗಳಿಗೆ ನುಗ್ಗಿ ಜನರು ಪರದಾಡುತ್ತಿದ್ದಾರೆ. ಈ ನಡುವೆ ತಾಯಿ ನಾಯಿಯೊಂದು ತನ್ನ ಮರಿಯನ್ನು ರಕ್ಷಿಸಲು ಪರದಾಡಿದೆ. ನಾಯಿ ತನ್ನ ಮರಿಯನ್ನು ರಕ್ಷಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ತಡ ರಾತ್ರಿ ರಾಯಚೂರು ನಗರದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದೆ. ಮಳೆಯಿಂದಾಗಿ ಮನೆಗಳಿಗೆ ರಾಜಕಾಲುವೆ ನೀರು ನುಗ್ಗಿದೆ. ಸಿಯಾತಲಾಬ್ ಬಡಾವಣೆಗೆ ನೀರು ನುಗ್ಗಿದೆ. ನೀರು ನುಗ್ಗಿದ ಹಿನ್ನೆಲೆ ತಾಯಿ ನಾಯಿಯೊಂದು ತನ್ನ ಮರಿಯನ್ನ ರಕ್ಷಿಸಲು ಪರದಾಡಿದೆ. ತಾಯಿ ನಾಯಿ ಮರಿಯನ್ನ ಬಾಯಿಯಲ್ಲಿ ಹಿಡಿದು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗಿದೆ.

ಬಾಯಿಯಲ್ಲಿ ಮರಿಯನ್ನು ಹಿಡಿದು ಹೋಗುತ್ತಿರುವ ತಾಯಿ ನಾಯಿ

TV9 Kannada

Leave a comment

Your email address will not be published. Required fields are marked *