
ದೇವನೂರು ಮಹದೇವ
ಸಚಿವರು ನಾಗಪುರದ ಆರ್ಎಸ್ಎಸ್ ಪ್ರಭಾವಕ್ಕೆ ಒಳಗಾಗಿದ್ದಾರೆ. ಶೈಕ್ಷಣಿಕ ಕೊರತೆ ಉಂಟಾಗಬಾರದು, ಮೌಢ್ಯಕ್ಕೆ ಒಳಗಾಗಬಾರದು. ಅದಕ್ಕೆ ಪರ್ಯಾಯ ವಾಟ್ಸಾಪ್, ಫೇಸ್ಬುಕ್ ಸಾಮಾಜಿಕ ಜಾಲತಾಣಗಳ ಮೂಲಕ ಸಂವಿಧಾನ, ಕೈ ಬಿಟ್ಟ ಪಠ್ಯಗಳ ಬಗ್ಗೆ ಕಮ್ಮಟ ಕಾರ್ಯಾಗಳ ಮೂಲಕ ಮನವರಿಕೆ ಮಾಡ್ತೀವಿ. -ದೇವನೂರು ಮಹದೇವ
ಮೈಸೂರು: ದೇವನೂರ ಮಹಾದೇವರ(Devanur Mahadeva) ಪಾಠಗಳು ಕೈ ಬಿಡಲ್ಲ ಎಂಬ ಸಚಿವ ಬಿ.ಸಿ.ನಾಗೇಶ್(BC Nagesh) ಹೇಳಿಕೆಗೆ ಮೈಸೂರಲ್ಲಿ ಸಚಿವ ನಾಗೇಶ್ಗೆ ದೇವನೂರು ಮಹದೇವ ತಿರುಗೇಟು ಕೊಟ್ಟಿದ್ದಾರೆ. ಪಠ್ಯ ಪುಸ್ತಕ ಪ್ರಿಂಟ್ ಆಗಿದೆ ಅಂದ್ರೆ ವಾಪಾಸ್ ಕಿತ್ತುಕೊಳ್ಳೋಕೆ ಆಗುತ್ತಾ? ಪಠ್ಯ ಮಕ್ಕಳ ಕೈ ಸೇರಿದ್ದರೆ ಸರ್ಕಾರ, ಅಧಿಕಾರ ಅವರ ಕೈನಲ್ಲೇ ಇದೆ. ಪಾಠ ಮಾಡಬೇಡಿ ಎಂದು ಸರ್ಕಾರ ಹೇಳಲಿ ಎಂದು ತಿರುಗೇಟು ಕೊಟ್ಟಿದ್ದಾರೆ.
ಸಚಿವರು ನಾಗಪುರದ ಆರ್ಎಸ್ಎಸ್ ಪ್ರಭಾವಕ್ಕೆ ಒಳಗಾಗಿದ್ದಾರೆ. ಶೈಕ್ಷಣಿಕ ಕೊರತೆ ಉಂಟಾಗಬಾರದು, ಮೌಢ್ಯಕ್ಕೆ ಒಳಗಾಗಬಾರದು. ಅದಕ್ಕೆ ಪರ್ಯಾಯ ವಾಟ್ಸಾಪ್, ಫೇಸ್ಬುಕ್ ಸಾಮಾಜಿಕ ಜಾಲತಾಣಗಳ ಮೂಲಕ ಸಂವಿಧಾನ, ಕೈ ಬಿಟ್ಟ ಪಠ್ಯಗಳ ಬಗ್ಗೆ ಕಮ್ಮಟ ಕಾರ್ಯಾಗಳ ಮೂಲಕ ಮನವರಿಕೆ ಮಾಡ್ತೀವಿ. ಈ ಮೂಲಕ ಪ್ರಜಾಸತ್ತಾತ್ಮಕವಾಗಿ ಗಟ್ಟಿಗೊಳಿಸುತ್ತೇವೆ ಎಂದು ಮೈಸೂರಿನಲ್ಲಿ ಹಿರಿಯ ಸಾಹಿತಿ ದೇವನೂರು ಮಹದೇವ ಹೇಳಿದ್ರು.
ನನ್ನ ಪಠ್ಯ ಮುದ್ರಣವಾಗಿದ್ರೆ ಅದನ್ನ ಪಾಠ ಮಾಡಬೇಡಿ. ಪಿ.ಲಂಕೇಶ್, ಬಸವರಾಜ್, ಸಾರಾ ಅಬ್ಬುಬಕರ್ ಇಂತವರ ಪಠ್ಯವನ್ನ ಕೈಬಿಟ್ಟಿದ್ದಾರೆ. ಇವರ ಬರಹಗಳನ್ನು ಕೈಬಿಟ್ಟು ಹೆಡ್ಗೆವಾರ್, ಸೂಲಿಬೆಲೆಯವರ ಪಠ್ಯವನ್ನು ಸೇರಿಸಲಾಗಿದೆ. ಸ್ವತಂತ್ರ ಹೋರಾಟದಿಂದ ವಿಮುಖವಾದವರು. ಸೂಲಿಬೆಲೆ ದ್ವೇಷವನ್ನು ಪಸರಿಸುವ ವ್ಯಕ್ತಿ. ಇವರು ಚಾತುರ್ವರ್ಣ ಪ್ರದೇಧಕ್ಕೆ ಸೇರಿದವರು. ಇಂತವರ ಪಠ್ಯದ ನಡುವೆ ನಾನು ಇರಬೇಕ ಅನಿಸಿತು. ಇದು ಮಾಡುತ್ತಿರುವುದು ಕೇಸರಿಕರಣವೆ. ಇದಕ್ಕೆ ಶಾಸ್ತ್ರ ಕೇಳಬೇಕಿಲ್ಲ. ನಾವು ಇನ್ನು ಮುಂದೆ ಮಕ್ಕಳ ವೈಚಾರಿಕಕ್ಕೆ ದಕ್ಕೆ ಬಾರದ ರೀತಿ ಪಠ್ಯ. ಅವರ ಮಾನವೀಯತೆ ಹೆಚ್ಚಿಸುವ ನಿಟ್ಟಿನ ಪಠ್ಯಗಳನ್ನು ಹೇಳಿಕೊಡುತ್ತೇವೆ. ಇದಕ್ಕಾಗಿ ಪರ್ಯಾಯ ಶಿಕ್ಷಣ ಕೊಡುವ ಒಂದು ಗುಂಪಿದೆ. ಇವರ ಜೊತೆ ನಾನಿರುತ್ತೇನೆ.