ದೇವರಹಿಪ್ಪರಗಿ ಮತ್ತು ತಾಳಿಕೋಟೆ ರೈತರ ಬಹುದಿನಗಳ ನೀರಾವರಿ ಯೋಜನೆ ಕಾಮಗಾರಿಯನ್ನು ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು | CM Basavaraj Bommai inaugurates Budihal Peerapur lift irrigation project, elated farmers gift him a cow ARB


ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ (Devarahippargi) ಮತ್ತು ತಾಳೀಕೋಟೆ (Talikote) ತಾಲ್ಲೂಕಿನ ಹಲವಾರು ಗ್ರಾಮಗಳ ಜನರಲ್ಲ್ಲಿ ಮಂಗಳವಾರ ಹರ್ಷೋಲ್ಲಾಸ ಮನೆ ಮಾಡಿತ್ತು. ಈ ಎರಡು ತಾಲ್ಲೂಕುಗಳ 38 ಹಳ್ಳಿಗಳ ಸುಮಾರು 50,000 ಎಕರೆಗೂ ಹೆಚ್ಚು ಜಮೀನಿಗೆ ಕಷ್ಣಾ ಭಾಗ್ಯ ಜಲನಿಗಮದಿಂದ ನೀರಾವರಿ ಸೌಕರ್ಯ ಕಲ್ಪಿಸುವ ಬೂದಿಹಾಳ-ಪೀರಾಪುರ ಯೋಜನೆ (Budihal-Peerapur Lift Irrigation Project) ಮೊದಲ ಹಂತ ಕಾಮಗಾರಿಯ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲೆಯ ಕೊಡಗಾನೂರ ಗ್ರಾಮದ ಬಳಿ ನೇರವೇರಿಸಿದರು. ಯೋಜನೆ ಅಡಿಯಲ್ಲಿ ನಾರಾಯಣಪುರ ಆಣೆಕಟ್ಟಿನ ಹಿನ್ನೀರನ್ನು ಎತ್ತಿ 38 ಗ್ರಾಮಗಳಿಗೆ ಪೂರೈಸಲಾಗುವುದು. ಸಮಾರಭದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮತ್ತು ಇತರ ಹಲವಾರು ಗಣ್ಯರು ಭಾಗವಹಿಸಿದ್ದರು.

ಸದರಿ ಯೋಜನೆಯಿಂದ ಫಲಾನುಭವಿಗಳಾಗಲಿರುವ ಗ್ರಾಮಗಳಲ್ಲಿ ಒಂದಾಗಿರುವ ಬಂಟನೂರಿನ ಗ್ರಾಮಸ್ಥರು ಮುಖ್ಯಮಂತ್ರಿಗಳಿಗೆ ಒಂದು ಹಸುವನ್ನು ಉಡುಗೊರೆ ರೂಪದಲ್ಲಿ ನೀಡಿದರು. ಅದೇ ಗ್ರಾಮದ ರೈತರು ದೇವರ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರು ಅವರಿಗೆ ಎರಡು ಎತ್ತುಗಳನ್ನು ಕಾಣಿಕೆಯಾಗಿ ನೀಡಿದರು.

ಜೋಡೆತ್ತು ಮತ್ತು ಆಕಳನ್ನು ನೀವು ಈ ವಿಡಿಯೋನಲ್ಲಿ ಕಾಣಬಹುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎತ್ತುಗಳ ಮೇಲೆ ಪ್ರೀತಿಯಿಂದ ಮೈದಡವಿ ಅವುಗಳ ಮುಖದ ಮೇಲೆ ಕೈಯಾಡಿಸಿ ಒಂದು ಎತ್ತಿಗೆ ಮುತ್ತಿಡುತ್ತಿದ್ದಾರೆ. ನಂತರ ಅವರು ಎರಡಕ್ಕೂ ಹಣೆ ಮೇಲೆ ತಿಲಕವನ್ನಿಡುತ್ತಾರೆ.

ಆದರೆ ಅವರಿಗೆ ಉಡುಗೊರೆಯಾಗಿ ಸಿಕ್ಕಿರುವ ಹಸು ಮಾತ್ರ ಮುಖ್ಯಮಂತ್ರಿಗಳನ್ನು ಹತ್ತಿರಕ್ಕೂ ಬಿಟ್ಟುಕೊಳ್ಳುವುದಿಲ್ಲ. ಹತ್ತಿರ ಬಂದವರಿಗೆ ಆಕಳು ಇರಿಯಲು ಮುಂದಾದಾಗ ಬೊಮ್ಮಾಯಿ ಹಿಂದೆ ಸರಿದುಬಿಡುತ್ತಾರೆ.

TV9 Kannada


Leave a Reply

Your email address will not be published. Required fields are marked *