ಲಾಕಪ್​ ಡೆತ್​ ಸಿನಿಮಾದ ಮೂಲಕ ಕೋಟಿ ನಿರ್ಮಾಪಕರೆಂದೇ ಗುರುತಿಸಿಕೊಂಡ ನಿರ್ಮಾಪಕ ರಾಮು ನಿನ್ನೆ ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದ ಕಾರಣ ಬೆಂಗಳೂರಿನ ರಾಮಯ್ಯ ಆಸ್ಪತ್ರೆಗೆ ದಾಖಲಾದ ರಾಮು ಅವರಿಗೆ ಕೊರೊನಾ ಪಾಸಿಟಿವ್​ ದೃಢವಾಗಿತ್ತು. ಇಂದು ಅವರ ಹುಟ್ಟೂರಿನಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿದೆ.

ಅಂದ್ಹಾಗೇ, ರಾಮು ಮೊದಲ ಬಾರಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದು ‘ಗೋಲಿಬಾರ್’​ ಸಿನಿಮಾದ ಮೂಲಕ. ಡೈನಾಮಿಕ್​ ಸ್ಟಾರ್​ ದೇವರಾಜ್​ ನಾಯಕರಾಗಿ ನಟಿಸಿದ ಸಿನಿಮಾ ಇದು. ಗೋಲಿಬಾರ್​ನಿಂದ ಶುರುವಾದ ನಿರ್ಮಾಪಕ ರಾಮು ಸಿನಿಜರ್ನಿ ಬರೋಬ್ಬರಿ 40 ಸಿನಿಮಾಗಳ ನಿರ್ಮಾಣದವರೆಗೂ ಸಾಗಿತ್ತು.

ನಟ ದೇವರಾಜ್ ಅವರು ನಟಿಸಿದ್ದ ಸಿನಿಮಾದಿಂದ ತಮ್ಮ ಕರಿಯರ್ ಆರಂಭಿಸಿದ್ದ ರಾಮು, ಅವರ ಕೊನೆಯ ನಿರ್ಮಾಣದ ಸಿನಿಮಾದಲ್ಲಿ ದೇವರಾಜ್ ಮಗ ಪ್ರಜ್ವಲ್ ನಟಿಸಿದ್ದಾರೆ. ಪ್ರಜ್ವಲ್​​ ದೇವರಾಜ್​ ಅಭಿನಯದ ‘ಅರ್ಜುನ್​ ಗೌಡ’ ಸಿನಿಮಾ ರಾಮು ನಿರ್ಮಾಣದ ಕಟ್ಟ ಕಡೆಯ ಚಿತ್ರ. ಈ ತಿಂಗಳ 10ರಂದು ಈ ಸಿನಿಮಾದ ಟ್ರೈಲರ್​ ಕೂಡ ರಿಲೀಸ್​ ಆಗಿತ್ತು. ಈ ಸಿನಿಮಾದ ಬಗ್ಗೆ ರಾಮು ಬಹಳ ನಿರೀಕ್ಷೆಯನ್ನೂ ಇಟ್ಟುಕೊಂಡಿದ್ದರು ಅಂತ ನಟ ದೇವರಾಜ್​ ಮಾಧ್ಯಮದ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.

ಮತ್ತೊಂದು ಇಂಟ್ರೆಸ್ಟಿಂಗ್​ ವಿಚಾರ ಏನಂದ್ರೆ, ಗೋಲಿಬಾರ್​ ಸಿನಿಮಾದಲ್ಲಿ ದೇವರಾಜ್​ ಪಾತ್ರದ ಹೆಸರು ಅರ್ಜುನ್. ಅದೇ ಹೆಸರಿನಲ್ಲಿ ಪ್ರಜ್ವಲ್​ ದೇವರಾಜ್​ ಕೊನೆಯ ಸಿನಿಮಾವನ್ನ ರಾಮು ನಿರ್ಮಾಣ ಮಾಡಿದ್ದಾರೆ.

 

View this post on Instagram

 

A post shared by Prajwal Devaraj (@prajwaldevaraj)

ವಿಶೇಷ ಬರಹ: ರಕ್ಷಿತಾ.ರೈ, ಫಿಲ್ಮ್​ ಬ್ಯೂರೋ​

The post ದೇವರಾಜ್ ಜೊತೆ ರಾಮು ಅವಿನಾಭಾವ ಸಂಬಂಧ; ಮೊದಲ ಮತ್ತು ಕೊನೆಯ ಸಿನಿಮಾ ಯಾರ್​ ಜೊತೆ ಗೊತ್ತಾ? appeared first on News First Kannada.

Source: newsfirstlive.com

Source link