ಮೈಸೂರು ಪಾಲಿಕೆ
ಮೈಸೂರು: ದೇವರಾಜ ಮಾರುಕಟ್ಟೆ ಹೊಸದಾಗಿ ನಿರ್ಮಾಣಕ್ಕೆ ವಿರೋಧ ಹಿನ್ನೆಲೆ ಕಟ್ಟಡ ಉಳಿಸಿಕೊಂಡು ನವೀಕರಣ ಮಾಡುವಂತೆ ಒತ್ತಾಯ ಕೇಳಿ ಬಂದಿದ್ದು ಮೈಸೂರಿನ ಚಿಕ್ಕಗಡಿಯಾರ ಬಳಿ ಇಂದು ಪ್ರತಿಭಟನಾ ಱಲಿ ನಡೆಯಲಿದೆ. ಮಧ್ಯಾಹ್ನದವರೆಗೆ ಮಾರುಕಟ್ಟೆ ಬಂದ್ ಮಾಡಿ ಪ್ರತಿಭಟನೆ ನಡೆಸಲು ಮುಂದಾಗಿದ್ದು ಱಲಿಗೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ಗೆ ಆಹ್ವಾನ ನೀಡಲಾಗಿದೆ.
ದೇವರಾಜ ಮಾರುಕಟ್ಟೆ ಶಿಥಿಲಗೊಂಡಿರುವ ಹಿನ್ನೆಲೆ ಅದನ್ನು ನೆಲಸಮ ಮಾಡಿ ಹೊಸದಾಗಿ ಕಟ್ಟಲು ಪಾಲಿಕೆ ಮುಂದಾಗಿದೆ. ಆದ್ರೆ 100 ವರ್ಷದ ಇತಿಹಾಸ ಹೊಂದಿರುವ ದೇವರಾಜ ಮಾರ್ಕೆಟ್ ಹೊಸದಾಗಿ ಕಟ್ಟುವ ಮೈಸೂರು ಪಾಲಿಕೆ ನಿರ್ಧಾರಕ್ಕೆ ವ್ಯಾಪಾರಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಪಾರಂಪರಿಕ ಕಟ್ಟಡವನ್ನ ಉಳಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಕಟ್ಟಡವನ್ನ ನವೀಕರಣ ಮಾಡಿ ಹೊಸದಾಗಿ ಕಟ್ಟ ಬೇಡಿ ಎಂದು ಪ್ರತಿಭಟನೆಗೆ ಮುಂದಾಗಿದ್ದಾರೆ.
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ
ಇನ್ನು ಮತ್ತೊಂದೆಡೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಬಂಧನಕ್ಕೆ ಒತ್ತಾಯಿಸಿ ಮೈಸೂರಿನಲ್ಲಿ ಇಂದು ಕಾಂಗ್ರೆಸ್ ಪ್ರತಿಭಟನಾ ಱಲಿ ಹಮ್ಮಿಕೊಂಡಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಮೈಸೂರಿನ ಗಾಂಧಿ ವೃತ್ತದಲ್ಲಿ ಸಭೆ ನಡೆಯಲಿದ್ದು ಸಭೆ ಬಳಿಕ ಕಾಂಗ್ರೆಸ್ ಕಾರ್ಯಕರ್ತರಿಂದ ಪಾದಯಾತ್ರೆ ನಡೆಯುತ್ತೆ. ಗಾಂಧಿ ವೃತ್ತದಿಂದ ಮೈಸೂರು ಡಿಸಿ ಕಚೇರಿಯವರೆಗೆ ಱಲಿ ನಡೆಯಲಿದೆ. ಈಶ್ವರಪ್ಪರನ್ನ ಬಂಧಿಸುವಂತೆ ಮೈಸೂರು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತೆ.