ಬಳ್ಳಾರಿ: ತಾಯಿ ಜೊತೆ ಪ್ರಾರ್ಥನೆ ಮಾಡಲು ಬಂದ ಅಪ್ರಾಪ್ತೆಗೆ ಚರ್ಚ್ ಬ್ರದರ್ ತಾಳಿ ಕಟ್ಟಿದ ಆಘಾತಕಾರಿ ಘಟನೆ ಜಿಲ್ಲೆಯ ಸಿರಗುಪ್ಪ ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಗ್ರಾಮವೊಂದರ ಚರ್ಚ್ ನಲ್ಲಿ ಆರೋಪಿ ಜಾನಪ್ಪ ಎಂಬ ವ್ಯಕ್ತಿ ಬ್ರದರ್ ಕಾರ್ಯನಿರ್ವಹಿಸುತ್ತಿದ್ದ. ತಾಯಿ ಜೊತೆಯಲ್ಲಿ ಪ್ರಾರ್ಥನೆ ಮಾಡಲು ಬಂದಿದ್ದ ಅಪ್ರಾಪ್ತ ಬಾಲಕಿಗೆ ಈ ಚೆರ್ಚ್ ಬ್ರದರ್ ತಾಯಿ ಸಮ್ಮುಖದಲ್ಲಿಯೇ ತಾಳಿ ಕಟ್ಟಿದ್ದಾನೆ. ದೇವರು ನಿನಗೆ ತಾಳಿ ಕಟ್ಟು ಎಂದು ಆಜ್ಞೆ ಮಾಡಿದ್ದಾನೆ. ಹೀಗಾಗಿ ನಾನು ನಿನಗೆ ತಾಳಿ ಕಟ್ಟುತ್ತಿರುವೆ ಎಂದು ಹೇಳಿ ತಾಳಿ ಕಟ್ಟಿದ್ದಾನೆ.

ಈ ಘಟನೆ ಕಳೆದ ಒಂದು ವಾರದ ಹಿಂದೆ ಅಂದರೆ ಜೂನ್ 12 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತಾಯಿ ಹಾಗೂ ಮಗಳು ಚೆರ್ಚ್ ನಿಂದ ಊರಿಗೆ ಮರಳಿದ ಬಳಿಕ ಗ್ರಾಮಸ್ಥರ ಬಳಿ ಘಟನೆ ಬಗ್ಗೆ ವಿವರ ನೀಡಿದ್ದಾರೆ. ಗ್ರಾಮಸ್ಥರು ಕೂಡಲೇ ತಾಲೂಕಿನ ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಜಾನಪ್ಪ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.

The post ದೇವರು ಹೇಳಿದ ಅಂತ ಪ್ರಾರ್ಥನೆಗೆ ಬಂದ ಅಪ್ರಾಪ್ತೆಗೆ ತಾಳಿ ಕಟ್ಟಿದ..! appeared first on Public TV.

Source: publictv.in

Source link