ದೇವರ ಪವಾಡ ಅಂದ್ರೆ ಇದೇನಾ? ಹುಂಡಿಯಲ್ಲಿದ್ದ ಹಣ ಎಗರಿಸಲು ಬಂದವರಿಗೆ ನಾಗರಹಾವು ದರ್ಶನ – Big shock to thieves who came to steal from templeದೇವಾಲಯದಲ್ಲಿ ಕಳ್ಳತನ ಮಾಡಲು ಬಂದ ಕಳ್ಳರಿಗೆ ಶಾಕ್ ಒಂದು ಕಾದಿದ್ದು, ಹುಂಡಿಯಲ್ಲಿದ್ದ ಹಣ ಎಗರಿಸಲು ಬಂದವರಿಗೆ ನಾಗರಹಾವು ಕಾಣಿಸಿ ಕೊಳ್ಳುತ್ತಿದ್ದಂತೆ ಕಾಲ್ಕಿತ್ತಿದ್ದಾರೆ.

TV9kannada Web Team


| Edited By: ಗಂಗಾಧರ್​ ಬ. ಸಾಬೋಜಿ

Nov 11, 2022 | 9:08 PM
ಮಂಡ್ಯ: ದೇವಾಲಯದಲ್ಲಿ ಕಳ್ಳತನ ಮಾಡಲು ಬಂದ ಕಳ್ಳರಿಗೆ ಶಾಕ್ ಒಂದು ಕಾದಿದ್ದು, ಹುಂಡಿಯಲ್ಲಿದ್ದ ಹಣ ಎಗರಿಸಲು ಬಂದವರಿಗೆ ನಾಗರಹಾವು (snake) ಕಾಣಿಸಿ ಕೊಳ್ಳುತ್ತಿದ್ದಂತೆ ಕಾಲ್ಕಿತ್ತಿದ್ದಾರೆ. ಜಿಲ್ಲೆಯ ನಾಗಮಂಗಲ ತಾಲೂಕಿನ ಹುಳ್ಳೇನಹಳ್ಳಿಯಲ್ಲಿ ಘಟನೆ ನಡೆದಿದೆ. ಶ್ರೀ ಮಾಯಮ್ಮ ದೈತಮ್ಮ ದೇವಾಲಯದಲ್ಲಿ ಕಳ್ಳತನಕ್ಕೆ ಯತ್ನಿಸಿದ್ದು, ಕಳ್ಳರ ಕೈ ಚಳಕ ದೇವಾಲಯದ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ದೇವಿಯೇ ಹಾವಿನ ಸ್ವರೂಪದಲ್ಲಿ ಪ್ರತ್ಯಕ್ಷವಾಗಿದ್ದಾಳೆಂದು ಭಕ್ತಗಣ ನಂಬುತ್ತಿದೆ. ಮುಂಜಾನೆ ದೇವಾಲಯಕ್ಕೆ ಅರ್ಚಕರು ಬಂದ ಮೇಲೆ ಘಟನೆ ಬೆಳಕಿಗೆ ಬಂದಿದೆ. ಕಳ್ಳರ ವಿರುದ್ಧ ನಾಗಮಂಗಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

TV9 Kannada


Leave a Reply

Your email address will not be published.