ದೀಪಾವಳಿ ಹಬ್ಬವನ್ನ ಸರಳ ಹಾಗೂ ಸಾಮಾಜಿಕ ಕಳಕಳಿಯೊಂದಿಗೆ ಮಾಜಿ ಎಂಎಲ್ಸಿ ಹಾಗೂ ಜೆಡಿಎಸ್ ಮುಖಂಡ ಡಾ. ಟಿಎ ಶರವಣ ಆಚರಿಸಿದ್ದಾರೆ. ದೇವರ ಮಕ್ಕಳಾದ ಅಂದ ಮಕ್ಕಳ ಜೊತೆ ಸರಳವಾಗಿ ಸಿಹಿ ಹಂಚುವ ಮೂಲಕ ಬೆಳಕಿನ ಹಬ್ಬ ದೀಪಾವಳಿಯನ್ನು ಶರವಣ ಆಚರಣೆ ಮಾಡಿದ್ರು.
ಈ ದೀಪಾವಳಿ ಹಬ್ಬವೂ ಎಲ್ಲರ ಜೀವನದಲ್ಲೂ ಹಸಿರು ಮೂಡಿಸಲಿ, ಶುಭವನ್ನ ತರಲಿ ಎಂದು ಡಾ. ಟಿಎ ಶರವಣ ಆಶಿಸಿದ್ರು. ಬೆಂಗಳೂರಿನ ಅವೇಕ್ ವಿಶ್ವ ಸೇವಾ ಸಂಸ್ಥೆಗೆ 50 ಸಾವಿರ ರೂಪಾಯಿಯನ್ನು ದೇಣಿಗೆಯಾಗಿ ನೀಡಿದರು. ಇದೇ ಸಂದರ್ಭದಲ್ಲಿ ಅವೇಕ್ ವಿಶ್ವ ಸೇವಾಸಂಸ್ಥೆಯ ಅಧ್ಯಕ್ಷರಾದ ಗುರುದಾಸ್ ಸೇರಿದಂತೆ ಸಂಸ್ಥೆಯ ಸದಸ್ಯರು ಭಾಗಿಯಾಗಿದ್ದರು.