ಕೋಲಾರ: ದೇವಾಲಯ ನಿರ್ಮಾಣಕ್ಕೆಂದು ಪಾಯ ತೆಗೆಯುವ ವೇಳೆ ವಿಗ್ರಹವೊಂದು ಪತ್ತೆಯಾದ ಘಟನೆ ಜಿಲ್ಲೆಯ ಕೆಜಿಎಫ್​​​ನಲ್ಲಿ ನಡೆದಿದೆ.

ಕೆಜಿಎಫ್ ನಗರದ ಚಾಂಪಿಯನ್ ರೀಫ್ ಬಡಾವಣೆಯ ಎಸ್.ಟಿ.ಬ್ಲಾಕ್ ನಲ್ಲಿ ಈ ಘಟನೆ‌ ಸಂಭವಿಸಿರೋದು. ಬಡಾವಣೆಯಲ್ಲಿ ಮಾರಿಯಮ್ಮ ದೇವಾಲಯ ನಿರ್ಮಾಣ ಮಾಡಲು ಪಾಯ ಪೂಜೆ ಮಾಡಿದ‌ ನಂತರ ಜೆಸಿಬಿಗಳಿಂದ ಪಾಯ ಅಗೆಯುವ ವೇಳೆ ಈ ನವಗ್ರಹ ವಿಗ್ರಹ ಪತ್ತೆಯಾಗಿದೆ. ಸದ್ಯ ಸ್ಥಳೀಯರು ವಿಗ್ರಹವನ್ನು ಸಂರಕ್ಷಿಸಿ, ದೇವಾಲಯ ನಿರ್ಮಾಣವಾದ ಮೇಲೆ‌ ಪ್ರತಿಷ್ಠಾಪನೆ‌ ಮಾಡಲು‌ ನಿರ್ಧರಿಸಿದ್ದಾರೆ.

 

The post ದೇವಾಲಯ ನಿರ್ಮಾಣಕ್ಕೆಂದು ಪಾಯ ತೆಗೆಯುವ ವೇಳೆ ಸುಂದರ ವಿಗ್ರಹ ಪತ್ತೆ appeared first on News First Kannada.

Source: newsfirstlive.com

Source link