ದೇವೇಗೌಡರಿಗೆ ಕೊರೊನಾ;​ ಶೀಘ್ರ ಗುಣಮುಖರಾಗುವಂತೆ ಹಾರೈಸಿದ ಟಿ.ಎ.ಶರವಣ


ಬೆಂಗಳೂರು: ಕೊರೊನಾ ಸೋಂಕಿಗೆ ತುತ್ತಾಗಿ ನಗರದ ಮಣಿಪಾಲ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡ ಅವರು, ಆದಷ್ಟು ಬೇಗ ಕೊರೊನಾದಿಂದ ಗುಣಮುಖರಾಗಲಿ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಜೆಡಿಎಸ್​ ಮುಖಂಡ ಟಿ.ಎ.ಶರವಣ ಪ್ರಾರ್ಥಿಸಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿದ ಅವರು, ‘ಮಾಜಿ ಪ್ರಧಾನಿಗಳು ಹಾಗೂ ನಮ್ಮ ಪಕ್ಷದ ಸರ್ವೋಚ್ಛ ನಾಯಕರಾದ ಹೆಚ್.ಡಿ.ದೇವೇಗೌಡರಿಗೆ ಕೊರೊನಾ ಸೋಂಕು ದೃಢವಾಗಿದ್ದು, ಅತ್ಯಂತ ವಿಷಾದಕರ ಸಂಗತಿಯಾಗಿದೆ. ತಮ್ಮ ಜೀವನವಿಡೀ ಅನೇಕ ಹೋರಾಟಗಳನ್ನು ಯಶಸ್ವಿಯಾಗಿ ಮುನ್ನೆಡಿಸಿ ಗೆದ್ದಿರುವ ಅವರು ಕೊರೊನಾ ವಿರುದ್ಧ ಯಶಸ್ವಿಯಾಗಿ ಹೋರಾಡಿ ಗೆದ್ದುಬರಲೆಂದು ಪ್ರಾರ್ಥಿಸುವೆ ಎಂದು ಟ್ವೀಟ್​ ಮಾಡಿದ್ದಾರೆ.

News First Live Kannada


Leave a Reply

Your email address will not be published. Required fields are marked *