ಬೆಂಗಳೂರು: ನೈಸ್​​ ಸಂಸ್ಥೆ ಹೂಡಿದ್ದ ಮಾನನಷ್ಟ ಪ್ರಕರಣದಲ್ಲಿ ಮಾಜಿ ಪ್ರಧಾನಿ ಹೆಚ್​​ಡಿ ದೇವೇಗೌಡರಿಗೆ ಹಿನ್ನಡೆಯಾಗಿದೆ, ಎರಡು ಕೋಟಿ ರೂಪಾಯಿ ನಷ್ಟ ಪರಿಹಾರ ನೀಡಲು ಸಿಟಿ ಸಿವಿಲ್ ಕೋರ್ಟ್ ಗೌಡರಿಗೆ ಆದೇಶ ಹೊರಡಿಸಿದೆ.

ಸಂದರ್ಶನ ಒಂದರಲ್ಲಿ ದೇವೇಗೌಡರು, ನೈಸ್​ ಸಂಸ್ಥೆಗೆ ಧಕ್ಕೆಯಾಗುವ ರೀತಿಯಲ್ಲಿ ಮಾತನಾಡಿದ್ದರು ಅಂತ ಆರೋಪಿಸಲಾಗಿತ್ತು. ಈ ಸಂಬಂಧ ದೇವೇಗೌಡರ ವಿರುದ್ಧ ನೈಸ್​ ಸಂಸ್ಥೆ ಕೋರ್ಟ್​ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿತ್ತು. ಅರ್ಜಿಯಲ್ಲಿ 10 ಕೋಟಿ ರೂಪಾಯಿ ಪರಿಹಾರವನ್ನ ಸಂಸ್ಥೆ ಕೇಳಿತ್ತು.

ಇದೀಗ ಕೋರ್ಟ್​ನಲ್ಲಿ ಸಂಸ್ಥೆ ವಿರುದ್ಧ ಆರೋಪ ಸಾಬೀತುಪಡಿಸುವಲ್ಲಿ ದೇವೇಗೌಡರು ವಿಫಲರಾಗಿದ್ದಾರೆ. ಈ ಸಂಬಂಧ ನೈಸ್​ ಸಂಸ್ಥೆಗೆ 2 ಕೋಟಿ ರೂಪಾಯಿ ಪರಿಹಾರ ನೀಡಬೇಕು ಮತ್ತು ಇನ್ಮುಂದೆ ಯಾವುದೇ ಮಾನಹಾನಿ ಹೇಳಿಕೆ ನೀಡಬಾರದು ಅಂತಾ ಸಿಟಿ ಸಿವಿಲ್ ಕೋರ್ಟ್​ನ ನ್ಯಾ. ಮಲ್ಲನಗೌಡ ಆದೇಶ ನೀಡಿದ್ದಾರೆ.

ದೇವೇಗೌಡರ ವಿರುದ್ಧ 27 ಜೂನ್, 2012 ರಲ್ಲಿ‌ ಮಾನನಷ್ಟ ಮೊಕದ್ದಮೆ ಕೇಸ್​ ಹಾಕಲಾಗಿತ್ತು. ಬರೋಬ್ಬರಿ‌ 8 ವರ್ಷ, 11 ತಿಂಗಳು, 20 ದಿನಗಳ ನಂತರ ಆದೇಶ ಹೊರಬಿದ್ದಿದೆ.

The post ದೇವೇಗೌಡರಿಗೆ ಹಿನ್ನಡೆ: ನೈಸ್​ ಸಂಸ್ಥೆಗೆ ₹2 ಕೋಟಿ ನಷ್ಟ ಪರಿಹಾರ ನೀಡಲು ಕೋರ್ಟ್​ ಆದೇಶ appeared first on News First Kannada.

Source: newsfirstlive.com

Source link