ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡ, ಚೆನ್ಮಮ್ಮ ದಂಪತಿ ತಮ್ಮ 67ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮವನ್ನು ಪುತ್ರ, ಮಾಜಿ ಸಿಎಂ ಹೆಚ್​​.ಡಿ. ಕುಮಾರಸ್ವಾಮಿ ಅವರ ಕುಟುಂಬದೊಂದಿಗೆ ಆಚರಿಸಿಕೊಂಡಿದ್ದಾರೆ.

ವಿವಾಹ ವಾರ್ಷಿಕೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರ ಕೃಷಿ ಭೂಮಿಗೆ ಹೆಚ್​​ಡಿಡಿ ದಂಪತಿ ಭೇಟಿ ನೀಡಿದ್ದು, ಈ ವೇಳೆ ತೆಂಗಿನ ಸಸಿ ನೆಟ್ಟು ನೀರು ಎರೆದಿದ್ದಾರೆ. ಈ ಅಪರೂಪದ ಸಂದರ್ಭದ ಫೋಟೋ ಹಾಗೂ ವಿಡಿಯೋವನ್ನು ಹಂಚಿಕೊಂಡಿರುವ ಮಾಜಿ ಸಿಎಂ ಹೆಚ್​​.ಡಿ. ಕುಮಾರಸ್ವಾಮಿ ಅವರು ಭಾವನಾತ್ಮಕವಾಗಿ ತಂದೆ-ತಾಯಿಗೆ ಶುಭ ಕೋರಿದ್ದಾರೆ.

ಕುಮಾರಸ್ವಾಮಿ ಸರಣಿ ಟ್ವೀಟ್​​…
ರಾಮನಗರದ ಕೇತಗಾನಹಳ್ಳಿಯಲ್ಲಿ ನಾನು ಅತೀವ ಪ್ರೀತಿ, ಮಮತೆಯಿಂದ ಸೃಷ್ಟಿ ಮಾಡಿಕೊಂಡಿರುವ ‘ಕೃಷಿ ಭೂಮಿ’ಗೆ ಇಂದು ನಾಡಿನ ಮಣ್ಣಿನ ಮಗ, ರೈತರ ನಾಯಕ, ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರು ಆಗಮಿಸಿದ್ದರು. ಹಸಿರಿನಿಂದ ಕಂಗೊಳಿಸುತ್ತಾ, ಸಂಭ್ರಮಿಸುತ್ತಿರುವ ನನ್ನ ತೋಟವನ್ನು ಕಂಡು ‘ರೈತನ ಮಗ’ ದೇವೇಗೌಡರು ಅಷ್ಟೇ ಸಂಭ್ರಮ ಪಟ್ಟರು.

ದೇವೇಗೌಡರು, ತಾಯಿ ಚನ್ನಮ್ಮರಿಗೆ ಇಂದು 67ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ. ದಂಪತಿ ಈ ಶುಭ ದಿನ ನನ್ನ ಪ್ರೀತಿಯ ತೋಟಕ್ಕೆ ಆಗಮಿಸಿದ್ದು, ಕಲ್ಪವೃಕ್ಷವಾದ ತೆಂಗಿನ ಸಸಿ ನೆಟ್ಟಿದ್ದು ಅವರ ಮಗನಾದ ನನ್ನನ್ನು ಭಾವಪರವಶನಾಗುವಂತೆ ಮಾಡಿತು. ಈ ಅಪರೂಪದ ಸನ್ನಿವೇಶ ಸೃಷ್ಟಿಸಿದ ದೇವರಿಗೆ ನನ್ನ ನಮನಗಳು. ದೇವೇಗೌಡ ದಂಪತಿಗೆ ಶುಭಾಶಯಗಳು.

The post ದೇವೇಗೌಡ ದಂಪತಿಗೆ 67ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮ; ಗಿಡನೆಟ್ಟು ಸಂಭ್ರಮಿಸಿದ ಮಣ್ಣಿನ ಮಗ appeared first on News First Kannada.

Source: newsfirstlive.com

Source link