‘ದೇವ್ರನ್ನ ನಂಬಬೇಕೋ ಬೇಡವೋ ಎಂಬಂತಾಗಿದೆ’; ಅಯ್ಯಪ್ಪ ಭಕ್ತ ಶಿವರಾಂ ನಿಧನಕ್ಕೆ ಬೆಂಗಳೂರು ನಾಗೇಶ್​ ಕಂಬನಿ | Shivaram Death: Senior Actor Bangalore Nagesh talks about Shivaram and Ayyappa Swamy


ನಟ ಶಿವರಾಂ ನಿಧನಕ್ಕೆ (Shivaram Death) ಚಿತ್ರರಂಗದ ಅನೇಕರು ಕಂಬನಿ ಮಿಡಿಯುತ್ತಿದ್ದಾರೆ. ತಮ್ಮ ಗೆಳೆಯನ ಅಗಲಿಕೆ ಬಗ್ಗೆ ಹಿರಿಯ ನಟ ಬೆಂಗಳೂರು ನಾಗೇಶ್ (Bangalore Nagesh)​ ಅವರು ಮಾತನಾಡಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ಶಿವರಾಂ ಅವರು ಅಯ್ಯಪ್ಪ ಸ್ವಾಮಿಯ (Ayyappa Swamy) ಪರಮ ಭಕ್ತರಾಗಿದ್ದರು. ವರ್ಷಕ್ಕೆ ಮೂರು-ನಾಲ್ಕು ಬಾರಿ ಅವರು ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದರು. ಮನೆಯ ಟೆರೇಸ್​ನಲ್ಲಿ ಪೂಜೆ ಮಾಡಲು ಪ್ರತ್ಯೇಕವಾಗಿ ಜಾಗ ಮಾಡಿಕೊಂಡಿದ್ದರು. ಪೂಜೆ ಮಾಡುವಾಗಲೇ ಅವರು ಕುಸಿದು ಬಿದ್ದಿದ್ದರಿಂದ ತಲೆಗೆ ಪೆಟ್ಟು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಈ ಬಗ್ಗೆ ಬೆಂಗಳೂರು ನಾಗೇಶ್​ ಅವರು ತಮ್ಮ ನೋವಿನ ನುಡಿಗಳನ್ನು ಹಂಚಿಕೊಂಡಿದ್ದಾರೆ. ‘ದೇವರನ್ನು ನಂಬಬೇಕೋ ಬಿಡಬೇಕೋ ಎಂಬಂತಾಗಿದೆ. ಇಂಥ ದೈವ ಭಕ್ತನಿಗೆ ಈ ರೀತಿ ಆಗಿದ್ದರಿಂದ ಮನಸ್ಸಿಗೆ ತೀವ್ರ ದುಃಖ ಆಗಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

TV9 Kannada


Leave a Reply

Your email address will not be published. Required fields are marked *