ಇಂದು ಬೆಳಗ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಬೆಂಗಳೂರಿನ ಪ್ರಶಾಂತ್ ಆಸ್ಪತ್ರೆಗೆ ಭೇಟಿ ನೀಡಿ ಹಿರಿಯ ನಟ ಶಿವರಾಮ್ ಅವರ ಆರೋಗ್ಯವನ್ನ ವಿಚಾರಿಸಿದರು. ನಟ ಶಿವರಾಮ್ ನಿನ್ನೆ ಆಕಸ್ಮಿಕವಾಗಿ ಬಿದ್ದು ತಲೆಗೆ ಏಟು ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಿವಣ್ಣ ಆಸ್ಪತ್ರೆಗೆ ಭೇಟಿ ಆರೋಗ್ಯ ವಿಚಾರಿಸಿದರು.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶಿವಣ್ಣ.. ನಮ್ಮ ಫ್ಯಾಮಿಲಿಯ ಯಾವುದೇ ಪರಿಸ್ಥಿತಿಯಲ್ಲಿಯೂ ಅವರು ನಮ್ಮ ಜೊತೆ ಇದ್ರು. ಶಿವರಾಮಣ್ಣನ ದೇವರು ಕೈಬಿಡಲ್ಲ. ಚಿಕ್ಕ ವಯಸ್ಸಿನಿಂದಲೂ ನೋಡ್ತಿದ್ವಿ. ನಮ್ಮ ಕುಟುಂಬದಲ್ಲಿ ಅವರು ಒಬ್ಬರು. ನಾವೆಲ್ಲ ಅಯ್ಯಪ್ಪನ ದೇವಸ್ಥಾನಕ್ಕೆ ಮೂರು ವರ್ಷಗಳ ಹಿಂದೆ ಹೋಗಿದ್ವಿ.
ಆಗ ಅವರಿಗೆ 81 ವರ್ಷ ಆದ್ರೂ ಯಾವುದೇ ಸಹಾಯವಿಲ್ಲದೆ ಬೆಟ್ಟ ಹತ್ತುತ್ತಿದ್ರು. ಮನಸ್ಸು ಬಂದಗೆಲ್ಲಾ ಅಯ್ಯಪ್ಪ ದೇವಸ್ಥಾನಕ್ಕೆ ಅವರು ಹೋಗ್ತಿದ್ರು. ನಾವು ತಮ್ಮನ ಕಳೆದುಕೊಂಡ ನೋವುನಲ್ಲಿ ಇದ್ವಿ, ದೇವರು ನಮಗೆ ಯಾಕೆ ಪದೇ ಪದೇ ಇತರ ನೋವು ಕೊಡ್ತಾನೋ ಗೊತ್ತಿಲ್ಲ. ಅಯ್ಯಪ್ಪನ ಪೂಜೆ ವೇಳೆ ಹೀಗಾಗಿದೆ, ಅಂದರೆ ದೇವರು ಅವರನ್ನ ಕೈಬಿಡಲ್ಲ. ಈ ಪರಿಸ್ಥಿತಿಯಲ್ಲಿ ಅವರನ್ನ ನೋಡೋಕೆ ತುಂಬಾ ಕಷ್ಟ ಆಗುತ್ತದೆ. ಮತ್ತೆ ಅವರು ಗುಣಮುಖರಾಗಿ ಬರಬೇಕು ಅನ್ನೋ ಆಸೆ ನಮಗೆ ಇದೆ ಎಂದರು.