ಸಮನ್ವಿ ಸಾವಿನ ಸುದ್ದಿ ‘ನನ್ನಮ್ಮ ಸೂಪರ್ ಸ್ಟಾರ್’ ರಿಯಾಲಿಟಿ ಶೋ ತಂಡಕ್ಕೆ ದೊಡ್ಡ ಆಘಾತ ನೀಡಿದೆ. ಈ ಬಗ್ಗೆ ನ್ಯೂಸ್ಫಸ್ಟ್ ‘ನನ್ನಮ್ಮ ಸೂಪರ್ ಸ್ಟಾರ್’ ಶೋನ ಸಹ ಸ್ಪರ್ಧಿ ವಿಜಯಲಕ್ಷ್ಮಿ ಮಾತನಾಡಿ.. ನನಗೆ ಏನೂ ಹೇಳಬೇಕು ಅಂತಾ ಗೊತ್ತಾಗುತ್ತಿಲ್ಲ. ದೇವರು ಯಾಕೆ ಇಷ್ಟು ಕ್ರೂರಿಯಾದ ಅವಳ ಲೈಫ್ನಲ್ಲಿ ಅನ್ನೋದು ಗೊತ್ತಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ತುಂಬಾ ಟೈಲೆಂಟ್ ಇರುವ ಪುಟಾಣಿ ಅದಾಗಿತ್ತು. ನಮಗೆ ಎರಡ್ಮೂರು ವಾರಗಳಿಂದ ನೋಡಿದ ಆ ಮಗುವನ್ನ ಮರೆಯಲು ಆಗುತ್ತಿಲ್ಲ. ಇನ್ನು ಆ ತಾಯಿ ಹೇಗೆ ಸಹಿಸಿಕೊಳ್ಳುತ್ತಾಳೋ ಗೊತ್ತಿಲ್ಲ. ನಮ್ಮ ಮನೆಗೆ ಬನ್ನಿ ಎಂದು ಅಮೃತಾ ನಾಯ್ಡು ಮತ್ತು ಸಮನ್ವಿ ಕರೆದಿದ್ದರು. ಅಮೃತಾಗೆ ನಿಮ್ಮ ಡೆಲಿವರಿ ಆದಾಗ ಬರುತ್ತೇವೆ ಎಂದಿದ್ದೆ. ಆದರೆ ಈಗ ಸಮನ್ವಿಯೇ ಇಲ್ಲ ಎಂದು ದುಃಖ ವ್ಯಕ್ತಪಡಿಸಿದರು.