ದೇಶಕ್ಕಾಗಿ ಸತ್ಯ-ನಿಷ್ಠೆಯಿಂದ ಕೆಲಸ ಮಾಡೋರೊಂದಿಗೆ.. ಅವರಿಗಾಗೇ ನಾನಿದ್ದೀನಿ -ಪ್ರಧಾನಿ ಮೋದಿ


ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಬ್ಯಾಂಕಿಂಗ್ ಕ್ಷೇತ್ರದ ಅಭಿವೃದ್ಧಿಯ ಪ್ರಮುಖ ಸಭೆಯಲ್ಲಿ ಮಾತನಾಡುತ್ತಾ, ದೇಶಕ್ಕಾಗಿ ಸತ್ಯ-ನಿಷ್ಠೆಯಿಂದ ಕೆಲಸ ಮಾಡೋರೊಂದಿಗೆ.. ಅವರಿಗಾಗೇ ನಾನಿದ್ದೀನಿ ಎಂದು ಹೇಳಿದ್ದಾರೆ.

ಇಂದು ವಿಡಿಯೋ ಕಾನ್ಫರೆನ್ಸ್​ ಮೂಲಕ ಕ್ರಿಯೇಟಿಂಗ್ ಸಿನರ್ಜೀಸ್ ಫಾರ್ ಸೀಮ್​ಲೆಸ್ ಕ್ರೆಡಿಟ್ ಫ್ಲೋಅಂಡ್ ಎಕನಾಮಿಕ್ ಗ್ರೋಥ್ ಸಭೆಯಲ್ಲಿ ಮಾತನಾಡುತ್ತಾ, ಇಂದು ಭಾರತದ ಬಾಂಕಿಂಗ್ ಕ್ಷೇತ್ರ ಬಲಿಷ್ಠವಾಗುತ್ತಿದೆ. ಒಂದು ಕಡೆ ಜನಧನ್​ ಅಕೌಂಟ್​ ಮೂಲಕ ಕೋಟ್ಯಂತರ ಜನ ಬ್ಯಾಂಕಿಂಗ್​ ಕ್ಷೇತ್ರದೊಂದಿಗೆ ಬೆಸೆದುಕೊಂಡಿದ್ದಾರೆ. ಇನ್ನೊಂದೆಡೆ, ಡಿಫೆನ್ಸ್​ ಕಾರಿಡಾರ್​, ಇಂಡಸ್ಟ್ರೀಯಲ್​ ಕಾರಿಡಾರ್, ಬುಲೆಟ್ ಟ್ರೇನ್, ಸ್ವಾಮಿತ್ವ್ ಸ್ಕೀಮ್, ಆತ್ಮ ನಿರ್ಭರ ಭಾರತ ಯೋಜನೆ ದೇಶದ ವಿತ್ತೀಯ ಕ್ಷೇತ್ರದಲ್ಲಿ ಭಾರೀ ಬದಲಾವಣೆ ತರುತ್ತಿವೆ. ಜೊತೆಗೆ ಇಡೀ ಜಗತ್ತಿನಲ್ಲಿಯೇ ಅತ್ಯಂತ ಬಲಿಷ್ಠ ಯುಪಿಐ ಅಂದ್ರೆ ಡಿಜಿಟಲ್ ವ್ಯಾಲೆಟ್ ಸೌಲಭ್ಯವನ್ನು ನಾವು ಹೊಂದಿದ್ದೇವೆ. ಇದೇ ಕಾರಣದಿಂದಾಗಿ ಫಿನ್​-ಟೆಕ್ ಕ್ಷೇತ್ರ ಕೂಡ ಗಣನೀಯವಾದ ಅಭಿವೃದ್ಧಿಯನ್ನು ಕಾಣುತ್ತಿದೆ. ಇದು ಬ್ಯಾಂಕಿಂಗ್ ಕ್ಷೇತ್ರವನ್ನ ಬಲಿಷ್ಠ ಗೊಳಿಸುವುದರ ಮೂಲಕ ಹೊಸ ಬೆಳವಣಿಗೆ ಅವಕಾಶ ಕಲ್ಪಿಸಿವೆ. ಇದನ್ನು ಬ್ಯಾಂಕಿಂಗ್ ಕ್ಷೇತ್ರ ಬಳಸಿಕೊಳ್ಳುವತ್ತ ಚಿಂತನೆ ನಡೆಸಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಅಲ್ಲದೇ ದೇಶದ ಬಗ್ಗೆ ಸತ್ಯ-ನಿಷ್ಠೆಯಿಂದ ನೀವು ಕಾರ್ಯ ನಿರ್ವಹಿಸಿ. ನೀವು ಅಂತಷ್ಟೇ ಅಲ್ಲ ಯಾರೇ ದೇಶಕ್ಕಾಗಿ ಸತ್ಯ ನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತಿದ್ದರೆ ಅಂಥವರ ಪರ ನಾನಿದ್ದೇನೆ. ಅಂಥವರಿಗಾಗಿಯೇ ನಾನಿದ್ದೇನೆ. ನೀವು ನನ್ನ ಮಾತಿನ ವಿಡಿಯೋ ಕ್ಲಿಪ್​ ಅನ್ನ ನಿಮ್ಮ ಬಳಿ ಇಟ್ಟುಕೊಳ್ಳಿ. ನೀವು ಸತ್ಯ-ನಿಷ್ಠೆಯಿಂದ ದೇಶಕ್ಕಾಗಿ ಕಾರ್ಯ ಮಾಡಿ.. ನಿಮ್ಮ ಬೆಂಬಲಕ್ಕೆ ನಾನು ಗೋಡೆ ರೀತಿ ನಿಲ್ಲುತ್ತೇನೆ. ಒಂದು ವೇಳೆ ಈ ವೇಳೆ ನಿಮ್ಮಿಂದ ತಪ್ಪುಗಳಾದರೂ ನಿಮ್ಮ ರಕ್ಷಣೆಗಾಗಿ ನಾನಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

News First Live Kannada


Leave a Reply

Your email address will not be published. Required fields are marked *