ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 3,43,144 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇನ್ನು ಸೋಂಕಿನಿಂದ 3,44, 776 ಮಂದಿ ಡಿಸ್ಚಾರ್ಜ್ ಆಗಿದ್ದು ಪಾಸಿಟಿವ್ ಆದವರಿಗಿಂತ ಇಂದು ಡಿಸ್ಚಾರ್ಜ್ ಆದವರ ಸಂಖ್ಯೆಯೇ ಹೆಚ್ಚಿದೆ. ಕಳೆದ 24 ಗಂಟೆಗಳಲ್ಲಿ 4,000 ಜನರು ಕೊರೊನಾ ಸೋಂಕಿನಿಂದಾಗಿ ಪ್ರಾಣ ಚೆಲ್ಲಿದ್ದಾರೆ.

ದೇಶದಲ್ಲಿ ಈವರೆಗೆ ಕೊರೊನಾ ಸೋಂಕಿಗೊಳಗಾದವರ ಒಟ್ಟು ಸಂಖ್ಯೆ 2,40,46,809ಕ್ಕೆ ಏರಿಕೆಯಾಗಿದೆ. ಇನ್ನು ಈವರೆಗೆ ಡಿಸ್ಚಾರ್ಜ್ ಆದವರ ಸಂಖ್ಯೆ 2,00,79,599ಕ್ಕೆ ಏರಿಕೆಯಾಗಿದೆ. ಇನ್ನು ಒಟ್ಟು 2,62,317 ಮಂದಿ ಈವರೆಗೆ ಸೋಂಕಿನಿಂದಾಗಿ ಸಾವನ್ನಪ್ಪಿದಂತಾಗಿದೆ. ದೇಶದಲ್ಲಿ ಸದ್ಯ 37,04,893 ಆ್ಯಕ್ಟಿವ ಕೇಸ್​ಗಳಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

ಕೊರೊನಾ ಅಂಕಿ-ಅಂಶಗಳು

  • ಒಟ್ಟು ಪ್ರಕರಣಗಳು- 2,40,46,809
  • ಒಟ್ಟು ಗುಣಮುಖರಾದವರು-2,00,79,599
  • ಈವರೆಗೆ ಸೋಂಕಿನಿಂದ ಸಾವನ್ನಪ್ಪಿದವರು- 2,62,317
  • ಸಕ್ರಿಯ ಪ್ರಕರಣಗಳು- 37,04,893
  • ಈವರೆಗೆ ವ್ಯಾಕ್ಸಿನ್ ಪಡೆದವರು- 17,92,98,584

The post ದೇಶದಲ್ಲಿಂದು ಪಾಸಿಟಿವ್​ ಆದವರಿಗಿಂತಲೂ ಡಿಸ್ಚಾರ್ಜ್ ಆದವರೇ ಹೆಚ್ಚು.. 4,000 ಮಂದಿ ಸಾವು appeared first on News First Kannada.

Source: newsfirstlive.com

Source link