ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 1,32,364 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇನ್ನು 2,07,071 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಸೋಂಕಿನಿಂದಾಗಿ ಇಂದು 2,713 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

ಇನ್ನು ದೇಶದಾದ್ಯಂತ ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 2,85,74,350 ಕ್ಕೆ ಏರಿಕೆಯಾಗಿದೆ. ಈವರೆಗೆ ಒಟ್ಟಾರೆ 2,65,97,655 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ದೇಶದಲ್ಲಿ ಸದ್ಯ 16,35,993 ಆ್ಯಕ್ಟಿವ್ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆಯ ಅಂಕಿಅಂಶಗಳು ಹೇಳುತ್ತಿವೆ.

ದೇಶದಲ್ಲಿ ಕೊರೊನಾ ಅಂಕಿ-ಅಂಶ
ಇಂದು ಸೋಂಕಿಗೊಳಗಾದವರು-1,32,364
ಈವರೆಗೆ ಸೋಂಕಿಗೊಳಗಾದವರು-2,85,74,350
ಇಂದು ಡಿಸ್ಚಾರ್ಜ್ ಆದವರು- 2,07,071
ಈವರೆಗೆ ಡಿಸ್ಚಾರ್ಜ್ ಆದವರು- 2,65,97,655
ಒಟ್ಟಾರೆ ಈವರೆಗೆ ವ್ಯಾಕ್ಸಿನ್ ಪಡೆದವರು- 22,41,09,448

The post ದೇಶದಲ್ಲಿಂದು 1,32,364 ಪಾಸಿಟಿವ್ ಕೇಸ್.. 2,07,071 ಮಂದಿ ಡಿಸ್ಚಾರ್ಜ್ appeared first on News First Kannada.

Source: newsfirstlive.com

Source link