ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 3,11,170 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 4,077  ಮಂದಿ ಮೃತಪಟ್ಟಿದ್ದಾರೆ. 3,62,437 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು ಪಾಸಿಟಿವ್ ಆದವರಿಗಿಂತ ಇಂದು ಡಿಸ್ಚಾರ್ಜ್ ಆದವರ ಸಂಖ್ಯೆ ಹೆಚ್ಚಿದೆ.

ದೇಶದಲ್ಲಿ ಈವರೆಗೆ ಕೊರೊನಾ ಸೋಂಕಿಗೊಳಗಾದವರ ಒಟ್ಟು ಸಂಖ್ಯೆ 2,46,84,077ಕ್ಕೆ ಏರಿಕೆಯಾಗಿದೆ. ಇನ್ನು ಈವರೆಗೆ ಡಿಸ್ಚಾರ್ಜ್ ಆದವರ ಸಂಖ್ಯೆ 2,07,95,335ಕ್ಕೆ ಏರಿಕೆಯಾಗಿದೆ.  ಒಟ್ಟು 2,70,284 ಮಂದಿ ಈವರೆಗೆ ಸೋಂಕಿನಿಂದಾಗಿ ಸಾವನ್ನಪ್ಪಿದಂತಾಗಿದೆ. ದೇಶದಲ್ಲಿ ಸದ್ಯ 36,18,458 ಆ್ಯಕ್ಟಿವ್ ಕೇಸ್​ಗಳಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

ಕೊರೊನಾ ಅಂಕಿ-ಅಂಶಗಳು

  • ಒಟ್ಟು ಪ್ರಕರಣಗಳು- 2,46,84,077
  • ಒಟ್ಟು ಗುಣಮುಖರಾದವರು- 2,07,95,335
  • ಈವರೆಗೆ ಸೋಂಕಿನಿಂದ ಸಾವನ್ನಪ್ಪಿದವರು- 2,70,284 
  • ಸಕ್ರಿಯ ಪ್ರಕರಣಗಳು-36,18,458
  • ಈವರೆಗೆ ವ್ಯಾಕ್ಸಿನ್ ಪಡೆದವರು-18,22,20,164

 

The post ದೇಶದಲ್ಲಿಂದು 3,11,170 ಜನರಿಗೆ ಕೊರೊನಾ, 3,62,437 ಮಂದಿ ಡಿಸ್ಚಾರ್ಜ್ appeared first on News First Kannada.

Source: newsfirstlive.com

Source link