ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 45,951 ಹೊಸ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. 102 ದಿನಗಳ ಬಳಿಕ ದೇಶದಲ್ಲಿ 40 ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗಿವೆ. ಇಂದಿನ ಪ್ರಕರಣಗಳು ಸೇರಿ ದೇಶದಲ್ಲಿ ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 3,03,62,848ಕ್ಕೆ ತಲುಪಿದೆ.

ಇಂದು 60,729 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಈವರೆಗೆ ಡಿಸ್ಚಾರ್ಜ್ ಆದವರ ಸಂಖ್ಯೆ 2,94,27,330ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 817 ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಇದುವರೆಗೆ ಒಟ್ಟಾರೆ 3,98,454 ಮಂದಿ ಕೋವಿಡ್​ಗೆ ಬಲಿಯಾದಂತಾಗಿದೆ. ಸದ್ಯ ದೇಶದಲ್ಲಿ ರಿಕವರಿ ರೇಟ್​(ಸೋಂಕಿತರು ಗುಣಮುಖರಾಗ್ತಿರುವ ಪ್ರಮಾಣ) ಶೇಕಡ 96.92 ಇದೆ. 

ಕೊರೊನಾ ಅಂಕಿ-ಅಂಶಗಳು
ಒಟ್ಟು ಸೋಂಕಿತರು: 3,03,62,848
ಒಟ್ಟು ಡಿಸ್ಚಾರ್ಜ್ ಆದವರು: 2,94,27,330
ಒಟ್ಟು ಸಾವುಗಳು: 3,98,454
ಒಟ್ಟು ಆ್ಯಕ್ಟಿವ್ ಕೇಸ್​​ಗಳು: 5,37,064
ಈವರಗೆ ವ್ಯಾಕ್ಸಿನ್ ಪಡೆದವರು: 33,28,54,527

The post ದೇಶದಲ್ಲಿಂದು 45,951 ಜನರಿಗೆ ಕೊರೊನಾ.. ರಿಕವರಿ ರೇಟ್ 96.92% appeared first on News First Kannada.

Source: newsfirstlive.com

Source link