ದೇಶದಲ್ಲಿಂದು 53,256 ಜನರಿಗೆ ಕೊರೊನಾ.. 78,190 ಮಂದಿ ಗುಣಮುಖ

ದೇಶದಲ್ಲಿಂದು 53,256 ಜನರಿಗೆ ಕೊರೊನಾ.. 78,190 ಮಂದಿ ಗುಣಮುಖ

ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 53,256 ಹೊಸ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಕಳೆದ 88 ದಿನಗಳ ಬಳಿಕ ಒಂದೇ ದಿನ ದಾಖಲಾದ ಅತ್ಯಂತ ಕಡಿಮೆ ಕೇಸ್​​ಗಳ ಸಂಖ್ಯೆ ಇದಾಗಿದೆ. ಇಂದಿನ ಪ್ರಕರಣಗಳು ಸೇರಿ ದೇಶದಲ್ಲಿ ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 2,99,35,221ಕ್ಕೆ ತಲುಪಿದೆ.

ಇಂದು 78,190 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಈವರೆಗೆ ಡಿಸ್ಚಾರ್ಜ್ ಆದವರ ಸಂಖ್ಯೆ 2,88,44,199ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ1422 ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಇದುವರೆಗೆ ಒಟ್ಟಾರೆ 3,88,135 ಮಂದಿ ಕೋವಿಡ್​ಗೆ ಬಲಿಯಾದಂತಾಗಿದೆ.

ಕೊರೊನಾ ಅಂಕಿ-ಅಂಶಗಳು
ಒಟ್ಟು ಸೋಂಕಿತರು: 2,99,35,221
ಒಟ್ಟು ಡಿಸ್ಚಾರ್ಜ್ ಆದವರು: 2,88,44,199
ಒಟ್ಟು ಸಾವುಗಳು: 3,88,135
ಒಟ್ಟು ಆ್ಯಕ್ಟಿವ್ ಕೇಸ್​​ಗಳು: 7,02,887
ಈವರಗೆ ವ್ಯಾಕ್ಸಿನ್ ಪಡೆದವರು: 28,00,36,898

 

The post ದೇಶದಲ್ಲಿಂದು 53,256 ಜನರಿಗೆ ಕೊರೊನಾ.. 78,190 ಮಂದಿ ಗುಣಮುಖ appeared first on News First Kannada.

Source: newsfirstlive.com

Source link