ದೇಶದಲ್ಲಿಂದು 58,419 ಜನರಿಗೆ ಕೊರೊನಾ.. 87,619 ಮಂದಿ ಗುಣಮುಖ

ದೇಶದಲ್ಲಿಂದು 58,419 ಜನರಿಗೆ ಕೊರೊನಾ.. 87,619 ಮಂದಿ ಗುಣಮುಖ

ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 58,419 ಹೊಸ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. 81 ದಿನಗಳ ಬಳಿಕ ಒಂದೇ ದಿನದ ಪ್ರಕರಣಗಳ ಸಂಖ್ಯೆ 60 ಸಾವಿರ ಗಡಿಗಿಂತ ಕೆಳಗಿಳಿದಿದೆ. ಇಂದಿನ ಪ್ರಕರಣಗಳು ಸೇರಿ ದೇಶದಲ್ಲಿ ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 2,98,81,965ಕ್ಕೆ ತಲುಪಿದೆ.

ಇಂದು 87,619 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಈವರೆಗೆ ಡಿಸ್ಚಾರ್ಜ್ ಆದವರ ಸಂಖ್ಯೆ 2,87,66,009ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 1576 ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಇದುವರೆಗೆ ಒಟ್ಟಾರೆ 3,86,713 ಮಂದಿ ಕೋವಿಡ್​ಗೆ ಬಲಿಯಾದಂತಾಗಿದೆ.

ಕೊರೊನಾ ಅಂಕಿ-ಅಂಶಗಳು
ಒಟ್ಟು ಸೋಂಕಿತರು: 2,98,81,965
ಒಟ್ಟು ಡಿಸ್ಚಾರ್ಜ್ ಆದವರು: 2,87,66,009
ಒಟ್ಟು ಸಾವುಗಳು: 3,86,713
ಒಟ್ಟು ಆ್ಯಕ್ಟಿವ್ ಕೇಸ್​​ಗಳು: 7,29,243
ಈವರಗೆ ವ್ಯಾಕ್ಸಿನ್ ಪಡೆದವರು: 27,66,93,572

 

The post ದೇಶದಲ್ಲಿಂದು 58,419 ಜನರಿಗೆ ಕೊರೊನಾ.. 87,619 ಮಂದಿ ಗುಣಮುಖ appeared first on News First Kannada.

Source: newsfirstlive.com

Source link