ದೇಶದಲ್ಲಿಂದು 60,471 ಕೊರೊನಾ ಕೇಸ್..ರಿಕವರಿ ರೇಟ್ ಶೇ. 95.80ಕ್ಕೆ ಏರಿಕೆ

ದೇಶದಲ್ಲಿಂದು 60,471 ಕೊರೊನಾ ಕೇಸ್..ರಿಕವರಿ ರೇಟ್ ಶೇ. 95.80ಕ್ಕೆ ಏರಿಕೆ

ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 62,224 ಹೊಸ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಇಂದಿನ ಪ್ರಕರಣಗಳು ಸೇರಿ ದೇಶದಲ್ಲಿ ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 2,96,33,105ಕ್ಕೆ ತಲುಪಿದೆ.

ಇಂದು 1,07,628 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವವರ ಪ್ರಮಾಣ ಶೇಕಡ 95.80ಕ್ಕೆ ಏರಿಕೆಯಾಗಿದೆ. ಈವರೆಗೆ ಡಿಸ್ಚಾರ್ಜ್ ಆದವರ ಸಂಖ್ಯೆ 2,83,88,100ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 2542 ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಇದುವರೆಗೆ ಒಟ್ಟಾರೆ 3,79,573  ಮಂದಿ ಕೋವಿಡ್​ಗೆ ಬಲಿಯಾದಂತಾಗಿದೆ.

ಕೊರೊನಾ ಅಂಕಿ-ಅಂಶಗಳು
ಒಟ್ಟು ಸೋಂಕಿತರು: 2,96,33,105
ಒಟ್ಟು ಡಿಸ್ಚಾರ್ಜ್ ಆದವರು: 2,83,88,100
ಒಟ್ಟು ಸಾವುಗಳು: 3,79,573
ಒಟ್ಟು ಆ್ಯಕ್ಟಿವ್ ಕೇಸ್​​ಗಳು: 8,65,432
ಈವರಗೆ ವ್ಯಾಕ್ಸಿನ್ ಪಡೆದವರು: 26,19,72,014

 

The post ದೇಶದಲ್ಲಿಂದು 60,471 ಕೊರೊನಾ ಕೇಸ್..ರಿಕವರಿ ರೇಟ್ ಶೇ. 95.80ಕ್ಕೆ ಏರಿಕೆ appeared first on News First Kannada.

Source: newsfirstlive.com

Source link