ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 60,753 ಹೊಸ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಇಂದಿನ ಪ್ರಕರಣಗಳು ಸೇರಿ ದೇಶದಲ್ಲಿ ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 2,98,23,546ಕ್ಕೆ ತಲುಪಿದೆ.

ಇಂದು 97,743 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಈವರೆಗೆ ಡಿಸ್ಚಾರ್ಜ್ ಆದವರ ಸಂಖ್ಯೆ 2,86,78,390ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 1,647 ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಇದುವರೆಗೆ ಒಟ್ಟಾರೆ 3,85,137  ಮಂದಿ ಕೋವಿಡ್​ಗೆ ಬಲಿಯಾದಂತಾಗಿದೆ.

ಕೊರೊನಾ ಅಂಕಿ-ಅಂಶಗಳು
ಒಟ್ಟು ಸೋಂಕಿತರು: 2,98,23,546
ಒಟ್ಟು ಡಿಸ್ಚಾರ್ಜ್ ಆದವರು: 2,86,78,390
ಒಟ್ಟು ಸಾವುಗಳು: 3,85,137
ಒಟ್ಟು ಆ್ಯಕ್ಟಿವ್ ಕೇಸ್​​ಗಳು: 7,60,019
ಈವರಗೆ ವ್ಯಾಕ್ಸಿನ್ ಪಡೆದವರು: 27,23,88,783

 

The post ದೇಶದಲ್ಲಿಂದು 60,753 ಜನರಿಗೆ ಕೊರೊನಾ.. 97,743 ಮಂದಿ ಡಿಸ್ಚಾರ್ಜ್​ appeared first on News First Kannada.

Source: newsfirstlive.com

Source link