ದೇಶದಲ್ಲಿಂದು 70,421 ಕೊರೊನಾ ಕೇಸ್.. ಏಪ್ರಿಲ್ 1ರ ನಂತರ ಭಾರೀ ಇಳಿಕೆ

ದೇಶದಲ್ಲಿಂದು 70,421 ಕೊರೊನಾ ಕೇಸ್.. ಏಪ್ರಿಲ್ 1ರ ನಂತರ ಭಾರೀ ಇಳಿಕೆ

ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 70,421 ಹೊಸ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಇದು ಕಳೆದ ಏಪ್ರಿಲ್ 1ರ ಬಳಿಕ ಅಂದ್ರೆ 72 ದಿನಗಳ ನಂತರ ದಾಖಲಾಗಿರೋ ಅತೀ ಕಡಿಮೆ ಕೇಸ್ ಆಗಿದೆ. ಇಂದಿನ ಪ್ರಕರಣಗಳು ಸೇರಿ ದೇಶದಲ್ಲಿ ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 2,95,10,410ಕ್ಕೆ ತಲುಪಿದೆ.

ಇಂದು 1,19,501 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ಡಿಸ್ಚಾರ್ಜ್ ಆದವರ ಸಂಖ್ಯೆ 2,81,62,947ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 3921 ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಇದುವರೆಗೆ ಒಟ್ಟಾರೆ 3,74,305 ಮಂದಿ ಕೋವಿಡ್​ಗೆ ಬಲಿಯಾದಂತಾಗಿದೆ.

ಕೊರೊನಾ ಅಂಕಿ-ಅಂಶಗಳು
ಒಟ್ಟು ಸೋಂಕಿತರು: 2,95,10,410
ಒಟ್ಟು ಡಿಸ್ಚಾರ್ಜ್ ಆದವರು: 2,81,62,947
ಒಟ್ಟು ಸಾವುಗಳು: 3,74,305
ಒಟ್ಟು ಆ್ಯಕ್ಟಿವ್ ಕೇಸ್​​ಗಳು: 9,73,158
ಈವರಗೆ ವ್ಯಾಕ್ಸಿನ್ ಪಡೆದವರು: 25,48,49,301

   

 

The post ದೇಶದಲ್ಲಿಂದು 70,421 ಕೊರೊನಾ ಕೇಸ್.. ಏಪ್ರಿಲ್ 1ರ ನಂತರ ಭಾರೀ ಇಳಿಕೆ appeared first on News First Kannada.

Source: newsfirstlive.com

Source link