ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 84,332 ಹೊಸ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಇದು ಕಳೆದ 70 ದಿನಗಳ ಬಳಿಕ ದಾಖಲಾಗಿರೋ ಅತೀ ಕಡಿಮೆ ಕೇಸ್ ಆಗಿದೆ. ಇಂದಿನ ಪ್ರಕರಣಗಳು ಸೇರಿ ದೇಶದಲ್ಲಿ ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 2,93,59,155ಕ್ಕೆ ತಲುಪಿದೆ.

ಇಂದು 1,21,311 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ಡಿಸ್ಚಾರ್ಜ್ ಆದವರ ಸಂಖ್ಯೆ 2,79,11,384ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 4,002 ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಇದುವರೆಗೆ ಒಟ್ಟಾರೆ 3,67,081 ಮಂದಿ ಕೋವಿಡ್​ಗೆ ಬಲಿಯಾದಂತಾಗಿದೆ.

ಕೊರೊನಾ ಅಂಕಿ-ಅಂಶಗಳು

ಒಟ್ಟು ಸೋಂಕಿತರು: 2,93,59,155
ಒಟ್ಟು ಡಿಸ್ಚಾರ್ಜ್ ಆದವರು: 2,79,11,384
ಒಟ್ಟು ಸಾವುಗಳು: 3,67,081
ಒಟ್ಟು ಆ್ಯಕ್ಟಿವ್ ಕೇಸ್​​ಗಳು: 10,80,690
ಈವರಗೆ ವ್ಯಾಕ್ಸಿನ್ ಪಡೆದವರು: 24,96,00,304

  

The post ದೇಶದಲ್ಲಿಂದು 84,332 ಜನರಿಗೆ ಕೊರೊನಾ​, 70 ದಿನಗಳ ಬಳಿಕ ಅತೀ ಕಡಿಮೆ ಕೇಸ್ appeared first on News First Kannada.

Source: newsfirstlive.com

Source link