ದೇಶದಲ್ಲಿ ಉತ್ತಮ ವಾಯುಗುಣಮಟ್ಟದ ನಗರಗಳಲ್ಲಿ ಮಂಜಿನ ನಗರಿ ಮಡಿಕೇರಿಗೆ ಅಗ್ರಸ್ಥಾನ


ಮಡಿಕೇರಿ: ವಿಶ್ವದ ಅತಿ ಮಾಲಿನ್ಯ ನಗರಿಗಳಲ್ಲಿ ರಾಷ್ಟ್ರ ರಾಜ್ಯಧಾನಿ ನಂಬರ ಒನ್ ಸ್ಥಾನದಲ್ಲಿದೆ. ದೇಶದ ಇತರ ನಗರಿಗಳು ಕೂಡ ದೆಹಲಿಯನ್ನೇ ಅನುಕರಿಸುತ್ತಿವೆ. ಇಂತ ಕೆಟ್ಟ ಸುದ್ದಿಯ ಮಧ್ಯೆ ಖುಷಿ ಕೊಡುವಂತಹ ಸುದ್ದಿಯೊಂದಿದೆ. ಅದೇನೆಂದರೆ ನಮ್ಮ ರಾಜ್ಯದ ಮಂಜಿನ ನಗರಿ ಮಡಿಕೇರಿ ದೇಶದಲ್ಲೇ ಅತಿ ಕಡಿಮೆ ವಾಯು ಮಾಲಿನ್ಯವಿರುವ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಹಸಿರ ಪ್ರಕೃತಿಯ ತವರು, ಬೆಟ್ಟ ಗುಡ್ಡ ರಮಣೀಯ ವಿಹಂಗಮ ನೋಟದ ತಾಣ ಕೊಡಗು ಜಿಲ್ಲೆ. ಬೆಟ್ಟ ಗುಡ್ಡಗಳ ಹಸಿರನ್ನೇ ಮುಕುಟವಾಗಿಸಿಕೊಂಡಿರೋ ಕೊಡಗು ಪ್ರವಾಸಿಗರ ನೆಚ್ಚಿನ ತಾಣ..ಪ್ರಕೃತಿ ಹೇಗಿರುತ್ತೆ ಅಂತ ಪ್ರತ್ಯಕ್ಷವಾಗಿ ಅನುಭವಿಸುವವರಿಗೆ ಮಡಿಕೇರಿ ಧರೆಗಿಳಿದ ಸ್ವರ್ಗ. ಬೆಟ್ಟಗುಡ್ಡಗಳು ಹಚ್ಚ ಹಸಿರ ರಾಶಿ, ಮೈ ಮನಗಳಿಗೆ ,ಮುತ್ತಿಕ್ಕುವ ಮಂಜು, ಹಸಿರ ರಾಶಿ ಮಧ್ಯೆ ಹಾಲ್ನೊರೆಯಾಗಿ ಧುಮ್ಮಿಕ್ಕುವ ಜಲಧಾರೆ…ಹೀಗೆ ಮಡಿಕೇರಿಯ ಸೌಂದರ್ಯವನ್ನ ಅನುಭವಿಸುವುದೇ ಒಂದು ಆನಂದ. ಈ ಹೆಗ್ಗಳಿಕೆಯ ಸಾಲಿಗೆ ಇದೀಗ ಮತ್ತೊಂದು ಗರಿ ಮೂಡಿದೆ.

ಹೌದು. ಇಡೀ ದೇಶದಲ್ಲಿಯೇ ಅತ್ಯಂತ ಗುಣಮಟ್ಟದ ಗಾಳಿ ಹೊಂದಿರುವ ನಗರ ಅನ್ನೋ ಖ್ಯಾತಿಗೆ ಮಡಿಕೇರಿ ಪಾತ್ರವಾಗಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವಾಯುಗುಣ ಮಟ್ಟದ ಬಗ್ಗೆ ವರದಿ ಬಿಡುಗಡೆ ಮಾಡಿದೆ. ದೇಶದ ಅತ್ಯುತ್ತಮ ಗಾಳಿಯ ಗುಣಮಟ್ಟದಲ್ಲಿ ಮಡಿಕೇರಿ ನಗರ ಅಗ್ರ ಸ್ಥಾನದಲ್ಲಿದೆ. ಮಡಿಕೇರಿ ಇಂಡೆಕ್ಸ್ ವ್ಯಾಲ್ಯೂ 19 ಅಂಕ ಇದ್ದು, ಪ್ರಥಮ ಸ್ಥಾನ ಹೊಂದಿದೆ. ಇದು ಜಿಲ್ಲೆಯ ಜನರಲ್ಲಿ ಸಂತಸ ತರಿಸಿದೆ.

ಇನ್ನೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗಾಳಿ ಗುಣಮಟ್ಟ ಉತ್ತಮವಾಗಿದೆ ಎಂಬ ವರದಿ ಬಂದಿದೆ. ಹಾಗದ್ರೆ ಯಾವ ಜಿಲ್ಲೆಯಲ್ಲಿ ಹೇಗಿದೆ ಅಂತ ನೋಡದಾದ್ರೆ. ಗದಗದ ಇಂಡೆಕ್ಸ್ ವ್ಯಾಲ್ಯೂ 21 ಇದ್ದು, ದೇಶದಲ್ಲಿಯೇ 2ನೇ ಸ್ಥಾನ ಪಡೆದಿದೆ. ಇನ್ನು ದಾವಣಗೆರೆ 23, ಬಾಗಲಕೋಟೆ 23, ಹಾಸನ 25, ಮೈಸೂರು 29, ಯಾದಗಿರಿ 30, ಹುಬ್ಬಳ್ಳಿ 35, ಶಿವಮೊಗ್ಗ 37, ರಾಮನಗರ 40, ಬೀದರ್ 41 ಮತ್ತು ಚಾಮರಾಜನಗರ ಅಂಕಗಳನ್ನು ಹೊಂದಿದೆ,)

ಹಾಗೆ ನೋಡಿದ್ರೆ ಇದು ಕೊಡಗಿನ ಜನರ ಪಾಲಿಗೆ ಹೊಸ ವಿಷಯವೇನಲ್ಲ., ಆದ್ರೆ ಈ ಗಾಳಿಯ ಗುಣಮಟ್ಟವನ್ನು ಉಳಿಸಿಕೊಳ್ಳುವ ಬಹುದೊಡ್ಡ ಜವಾಬ್ದಾರಿಯೂ ಇವರ ಮೇಲಿದೆ. ಯಾಕಂದ್ರೆ ಇತ್ತೀಚೆಗೆ ಅತಿಯಾದ ಪ್ರವಾಸೋದ್ಯಮದಿಂದ ಬಹಳಷ್ಟು ಒತ್ತಡವಾಗುತ್ತಿದೆ. ಅತಿಯಾದ ವಾಹನಗಳ ಓಡಾಟದಿಂದಾಗಿ ವಾಯು ಮಾಲಿನ್ಯ ಕುಸಿಯುತ್ತಿದೆ. ಹಾಗಾಗಿ ತಮ್ಮ ಜಿಲ್ಲೆಯ ಗಾಳಿಯ ಗುಣಮಟ್ಟವನ್ನು ಕಾಪಾಡುವ ನಿಟ್ಟಿನಲ್ಲಿ ಜಿಲ್ಲೆಯ ಜನರೂ ಮಾತ್ರವಲ್ಲದೆ, ಇಲ್ಲಿಗೆ ಆಗಮಿಸುವ ಪ್ರವಾಸಿಗರು ಬಹಳ ದೊಡ್ಡ ಜವಾಬ್ದಾರಿ ನಿಭಾಯಿಸಬೇಕಿದೆ. ಒಟ್ಟನಲ್ಲಿ ಮಡಿಕೇರಿಗೆ ದೇಶದಲ್ಲೇ ಅತ್ಯುತ್ತಮ ಗಾಳಿ ಹೊಂದಿದ ನಗರಿ ಅನ್ನೋ ಖ್ಯಾತಿ ಸಿಕ್ಕಿರುವುದು, ಮಡಿಕೇರಿ ಜನರ ಸಂತಸಕ್ಕೆ ಕಾರಣವಾಗಿದೆ.

ವಿಶೇಷ ವರದಿ; ಯುಗದೇವಯ್ಯ, ನ್ಯೂಸ್​​ ಫಸ್ಟ್​, ಮಡಿಕೇರಿ

News First Live Kannada


Leave a Reply

Your email address will not be published. Required fields are marked *