ದೇಶದಲ್ಲಿ ಒಂದೇ ದಿನ 6,148 ಸೋಂಕಿತರ ಸಾವು, ಈವರೆಗಿನ ಅತೀ ಹೆಚ್ಚು ಕೇಸ್

ದೇಶದಲ್ಲಿ ಒಂದೇ ದಿನ 6,148 ಸೋಂಕಿತರ ಸಾವು, ಈವರೆಗಿನ ಅತೀ ಹೆಚ್ಚು ಕೇಸ್

ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 94,052 ಹೊಸ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ದೇಶದಲ್ಲಿ ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 2,91,83,121 ಕ್ಕೆ ತಲುಪಿದೆ.

ಇಂದು 1,51,367 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ಡಿಸ್ಚಾರ್ಜ್ ಆದವರ ಸಂಖ್ಯೆ 2,76,55,493ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 6148 ಮಂದಿ ಸಾವನ್ನಪ್ಪಿದ್ದು, ಇದು ಈವರೆಗೆ ಒಂದೇ ದಿನದಲ್ಲಿ ದಾಖಲಾದ  ಅತೀ ಹೆಚ್ಚು ಸಾವಿನ ಸಂಖ್ಯೆಯಾಗಿದೆ. ಈ ಮೂಲಕ ದೇಶದಲ್ಲಿ ಇದುವರೆಗೆ ಒಟ್ಟಾರೆ 3,59,676 ಮಂದಿ ಕೋವಿಡ್​ಗೆ ಬಲಿಯಾದಂತಾಗಿದೆ.

ಕೊರೊನಾ ಅಂಕಿ-ಅಂಶಗಳು

ಒಟ್ಟು ಸೋಂಕಿತರು: 2,91,83,121
ಒಟ್ಟು ಡಿಸ್ಚಾರ್ಜ್ ಆದವರು: 2,76,55,493
ಒಟ್ಟು ಸಾವುಗಳು: 3,59,676
ಒಟ್ಟು ಆ್ಯಕ್ಟಿವ್ ಕೇಸ್​​ಗಳು: 11,67,952
ಈವರಗೆ ವ್ಯಾಕ್ಸಿನ್ ಪಡೆದವರು: 23,90,58,360

  

The post ದೇಶದಲ್ಲಿ ಒಂದೇ ದಿನ 6,148 ಸೋಂಕಿತರ ಸಾವು, ಈವರೆಗಿನ ಅತೀ ಹೆಚ್ಚು ಕೇಸ್ appeared first on News First Kannada.

Source: newsfirstlive.com

Source link