ನವದೆಹಲಿ: ಭಾರತದ ಆರೋಗ್ಯ ಮೂಲಸೌಕರ್ಯವು ಮಿತಿಗೆ ವಿಸ್ತರಿಸಲಾಗಿದ್ದು, ಈಗಿನ ಕೊರೊನಾ 2ನೇ ಅಲೆಯನ್ನ ನಿಯಂತ್ರಿಸಲು ಕಳೆದ ವರ್ಷ ಮಾರ್ಚ್​ನಲ್ಲಿ ವಿಧಿಸಲಾದ ಕಠಿಣ ಲಾಕ್​ಡೌನಿಂದಲೇ ಸಾಧ್ಯ ಅಂತಾ ​ಏಮ್ಸ್ ಆಸ್ಪತ್ರೆಯ ಮುಖ್ಯಸ್ಥ ಡಾ.ರಂದೀಪ್ ಗುಲೇರಿಯಾ ತಿಳಿಸಿದ್ದಾರೆ.

ಸದ್ಯ ದೇಶದಲ್ಲಿ ಕೊರೊನಾ ಎರಡನೇ ಅಲೆ ಉಗ್ರ ರೂಪವನ್ನು ಪಡೆದಿದೆ. ನಿರಂತರವಾಗಿ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಈ ಸಂಖ್ಯೆಯನ್ನು ತಗ್ಗಿಸಲು ನಾವು ಅಗ್ರೆಸಿವ್ ಆಗಿ ಕೆಲಸ ಮಾಡಬೇಕಾಗಿದೆ. ಈ ಹೊತ್ತಲ್ಲೇ ದೇಶದ ಆರೋಗ್ಯ ಸಿಬ್ಬಂದಿ ಹಾಗೂ ಮೂಲ ಸೌಕರ್ಯಗಳು ಮಿತಿಗೆ ಕುಸಿಯುತ್ತಿದೆ ಎಂದಿದ್ದಾರೆ.

ವಿಶ್ವದ ಯಾವುದೇ ಆರೋಗ್ಯ ವ್ಯವಸ್ಥೆಯು ಈ ರೀತಿಯ ಹೊರೆಗಳನ್ನು ನಿರ್ವಹಿಸಲು ಸಾಧ್ಯವಿಲ್ಲ. ಕಠಿಣ ನಿಯಂತ್ರಣ ಅಥವಾ ಲಾಕ್‌ಡೌನ್​​ನಿಂದ ಮಾತ್ರ ಇದನ್ನು ನಿಯಂತ್ರಿಸಲು ಸಾಧ್ಯ ಅಂತಾ ಡಾಕ್ಟರ್​ ಗುಲೇರಿಯಾ ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕಾದ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಹಾಗೂ ಅಧ್ಯಕ್ಷ ಜೋ ಬೈಡನ್ ಅವರ ಉನ್ನತ ವೈದ್ಯಕೀಯ ಸಲಹೆಗಾರರೂ ಆದ ಆಂಥೋನಿ ಫೌಸಿ ಕೂಡ ಇದೇ ಮಾತನ್ನ ಹೇಳಿದ್ದಾರೆ. ಕೊರೊನಾ ನಿಯಂತ್ರಿಸಲು ಕೆಲವು ವಾರಗಳ ಕಾಲ ಭಾರತದಲ್ಲಿ ಸಂಪೂರ್ಣ ಲಾಕ್​ಡೌನ್ ಮಾಡಬೇಕು ಎಂದು ಅವರು ಹೇಳಿದ್ದಾರೆಂದು ವರದಿಯಾಗಿದೆ.

The post ದೇಶದಲ್ಲಿ ಕೊರೊನಾ ಸುನಾಮಿ; ಭಾರತವನ್ನ ಮತ್ತೆ ಕಂಪ್ಲೀಟ್ ಲಾಕ್ ಮಾಡಿ ಎಂದ ತಜ್ಞರು appeared first on News First Kannada.

Source: newsfirstlive.com

Source link