ಇಂಧೋರ್: ಕೊರೊನಾ ಸೋಂಕಿನಿಂದ ಗುಣಮುಖರಾದವರಲ್ಲಿ ಕಂಡುಬರುತ್ತಿದ್ದ ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್, ಯೆಲ್ಲೋ ಫಂಗಸ್ ಜೊತೆಗೆ ಇದೀಗ ಗ್ರೀನ್ ಫಂಗಸ್ ಪ್ರಕರಣವೂ ದೇಶದಲ್ಲಿ ಇದೇ ಮೊದಲ ಬಾರಿಗೆ ಪತ್ತೆಯಾಗಿದೆ.

ಇಂದೋರ್​ನಲ್ಲಿ ಕೊರೊನಾದಿಂದ ಗುಣಮುಖರಾದ 34 ವರ್ಷದ ವ್ಯಕ್ತಿಯಲ್ಲಿ ಗ್ರೀನ್ ಫಂಗಸ್ ಪತ್ತೆಯಾಗಿದ್ದು ಅವರನ್ನ ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈಗೆ ಏರ್​ಲಿಫ್ಟ್ ಮಾಡಲಾಗಿದೆ. ಶ್ರೀ ಅರುಬಿಂದೋ ಇನ್​ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್​ನ ವೈದ್ಯ ಡಾ. ರವಿ ದೋಸಿ ಈ ಕುರಿತು ಹೇಳಿಕೆ ನೀಡಿದ್ದು ಆ ವ್ಯಕ್ತಿ ಬ್ಲ್ಯಾಕ್ ಫಂಗಸ್ ಸೋಂಕಿಗೆ ಒಳಗಾಗಿರೋ ಶಂಕೆ ವ್ಯಕ್ತವಾಗಿತ್ತು. ಆದರೆ ವೈದ್ಯಕೀಯ ಪರೀಕ್ಷೆಯ ನಂತರ ಆತ ಗ್ರೀನ್ ಫಂಗಸ್(Aspergillosis)ಗೆ ಒಳಗಾಗಿರುವುದು ಕಂಡು ಬಂದಿದೆ. ಆತನ ಶ್ವಾಸಕೋಶ, ರಕ್ತ ಮತ್ತು ಸೈನಸ್​ನಲ್ಲಿ ಗ್ರೀನ್ ಫಂಗಸ್ ಪತ್ತೆಯಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಬ್ಲ್ಯಾಕ್ ಫಂಗಸ್ ಬೆನ್ನಲ್ಲೇ ಬಂತು ವೈಟ್ ಫಂಗಸ್.. ಇದು ಎಷ್ಟು ಡೇಂಜರ್..?

ಹೆಚ್ಚಿನ ಸಂಶೋಧನೆ ಅಗತ್ಯ
ಗ್ರೀನ್ ಫಂಗಸ್,​ ಕೊರೊನಾದಿಂದ ಗುಣಮುಖರಾದವರಲ್ಲಿ ಹಾಗೂ ಸಾಮಾನ್ಯ ರೋಗಿಗಳಲ್ಲಿ ಯಾವ ರೀತಿ ವರ್ತಿಸುತ್ತದೆ ಎಂಬುದರ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯಬೇಕಿದೆ ಎಂದು ವೈದ್ಯರು ಇದೇ ವೇಳೆ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಕೊರೊನಾದಿಂದ ಗುಣಮುಖರಾದವ್ರಿಗೆ ಹೊಸ ರೋಗ- ಏನಿದು ಬ್ಲ್ಯಾಕ್ ಫಂಗಸ್? ಯಾರು ಹುಷಾರಾಗಿರಬೇಕು?

ಸದ್ಯ ಗ್ರೀನ್​ ಫಂಗಸ್​ ಕಾಯಿಲೆಗೆ ಒಳಗಾಗಿರುವ ವ್ಯಕ್ತಿಯ ಶ್ವಾಸಕೋಶ 100 ಪ್ರತಿಶತ ಕೋವಿಡ್​ ಸೋಂಕಿಗೆ ಒಳಗಾಗಿತ್ತು. ಒಂದು ತಿಂಗಳ ಕಾಲ ಆತನಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಹೇಳಲಾಗಿದೆ. ಸೋಂಕಿನಿಂದ ಗುಣಮುಖನಾದ ನಂತರ ಆತನ ಮೂಗಿನಲ್ಲಿ ರಕ್ತ ಸೋರಿಕೆ ಹಾಗೂ ತೀವ್ರ ಜ್ವರ ಕಾಣಿಸಿಕೊಂಡಿತ್ತು. ಅಲ್ಲದೇ ತೂಕ ಕಳೆದುಕೊಂಡು ನಿಶ್ಯಕ್ತಿಗೆ ಒಳಗಾಗಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಕಪ್ಪು, ಬಿಳಿಗಿಂತ ಮತ್ತಷ್ಟು ಡೇಂಜರ್ ಆಗಿರೋ ಯೆಲ್ಲೋ ಫಂಗಸ್​ ಪತ್ತೆ

The post ದೇಶದಲ್ಲಿ ಮೊಟ್ಟ ಮೊದಲ ಗ್ರೀನ್ ಫಂಗಸ್ ಪ್ರಕರಣ ಪತ್ತೆ.. ರೋಗಿ ಮುಂಬೈಗೆ ಶಿಫ್ಟ್​ appeared first on News First Kannada.

Source: newsfirstlive.com

Source link