ನವದೆಹಲಿ: ಮಾರ್ಚ್-ಮೇ ತಿಂಗಳ ಅವಧಿಯಲ್ಲಿ ಉತ್ತುಂಗಕ್ಕೇರಿದ ಕೋವಿಡ್ ಎರಡನೇ ಅಲೆ ತಗ್ಗುತ್ತಿದ್ದು, ಸೋಂಕು ಪ್ರಕರಣಗಳ ಸಂಖ್ಯೆ ಸದ್ಯ ಗಣನೀಯವಾಗಿ ಇಳಿಕೆ ಕಂಡಿದೆ. ಕೊರೊನಾ ಪರಿಸ್ಥಿತಿ ಸುಧಾರಣೆಯಾಗಿದೆ. ಈ ಹಿನ್ನೆಲೆ ಹೇಳಿಕೆ ನೀಡಿರುವ ಕೇಂದ್ರ ಸರ್ಕಾರ, ವೈರಸ್ ಪ್ರಸರಣ ಸದ್ಯ ತುಂಬಾ ಕಡಿಮೆಯಾಗಿದೆ ಎಂದಿದೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನೀತಿ ಆಯೋಗದ ಸದಸ್ಯ ವಿ.ಕೆ. ಪೌಲ್.. ನಾವು 2020 ರಲ್ಲಿ ಮತ್ತು ಈಗ ಹೆಚ್ಚಾಗಿ ಹರಡುವ ಕೊರೊನಾ ವೇರಿಯಂಟ್ ಎದುರಿಸುತ್ತಿದ್ದೇವೆ. ಜೊತೆಗೆ ನಾವು ಹೆಚ್ಚಿನ ಎಚ್ಚರಿಕೆಯನ್ನೂ ವಹಿಸುತ್ತಿದ್ದೇವೆ. ಕೊರೊನಾ ವೈರಸ್​​ ಜೊತೆಗಿನ ಹೋರಾಟದಲ್ಲಿ ವ್ಯಾಕ್ಸಿನೇಷನ್​ ನಮಗೆ ಹೆಚ್ಚುವರಿ ಆಯುಧ. ಎಲ್ಲರೂ ಸ್ವಚ್ಛತೆಯನ್ನ ಕಾಪಾಡಿಕೊಂಡು ಕೋವಿಡ್ ಮುನ್ನೆಚ್ಚರಿಕೆಗಳನ್ನ ಕಟ್ಟುನಿಟ್ಟಿನಿಂದ ಪಾಲಿಸುವಂತೆ ನಾನು ಮನವಿ ಮಾಡುತ್ತೇನೆ. ಜೊತೆಗೆ ಪ್ರಯಾಣವನ್ನ ಸಾಧ್ಯವಾದಷ್ಟೂ ಅವಾಯ್ಡ್ ಮಾಡಿ ಎಂದು ಕೇಳಿಕೊಳ್ತೇನೆ ಎಂದಿದ್ದಾರೆ.

ಕೊರೊನಾ ವೈರಸ್​ನ ಎರಡನೇ ಅಲೆಯಲ್ಲಿ ಡೆಲ್ಟಾ ವೇರಿಯಂಟ್ ಪ್ರಮುಖ ಪಾತ್ರ ವಹಿಸಿತ್ತು. ಈ ವೇರಿಯಂಟ್​​ನ ಹೆಚ್ಚುವರಿ ಮ್ಯೂಟೇಶನ್ ಆದ ಡೆಲ್ಟಾ ಪ್ಲಸ್ ಅನ್ನು ಗುರುತಿಸಲಾಗಿದ್ದು, ಅದರ ಡೇಟಾವನ್ನ ಗ್ಲೋಬಲ್ ಡೇಟಾ ಸಿಸ್ಟಮ್ ಜೊತೆಗೆ ಹಂಚಿಕೊಳ್ಳಲಾಗಿದೆ. ಮಾರ್ಚ್​ವರೆಗೂ ಈ ವೇರಿಯಂಟ್​ನ ಡೇಟಾ​ ಯೂರೋಪ್​ನಲ್ಲಿ ಇತ್ತು. ಸದ್ಯ ಜೂನ್ 13 ರಂದು ಅದನ್ನ ಪಬ್ಲಿಕ್ ಡೊಮೇಯ್ನ್​ಗೆ ತರಲಾಗಿದೆ. ಅದರ ಬಗ್ಗೆ ಹೆಚ್ಚಾಗಿ ಗಮನಹರಿಸುವ ಅಗತ್ಯ ಈಗಿಲ್ಲ ಎಂದು ಇದೇ ವಿ.ಕೆ. ಪೌಲ್ ಮಾಹಿತಿ ನೀಡಿದ್ದಾರೆ.

The post ದೇಶದಲ್ಲಿ ವೈರಸ್ ಹರಡುವಿಕೆ ಗಣನೀಯ ಇಳಿಕೆ ಕಂಡಿದೆ- ನೀತಿ ಆಯೋಗ appeared first on News First Kannada.

Source: newsfirstlive.com

Source link