ದೇಶದಲ್ಲಿ ಕೊರೊನಾ ಎರಡನೇ ಅಲೆಯ ತೀವ್ರತೆ ಹೆಚ್ಚಾಗಿ ಸೋಂಕಿನ ಹರಡುವಿಕೆಯ ಪ್ರಮಾಣ ಹಾಗೂ ಸಾವು ನೋವಿನ ಸಂಖ್ಯೆ ಹೆಚ್ಚಾಗಲು ಕೋವಿಡ್​ ರೂಪಾಂತರಿ ವೈರಸ್​ ಕಾರಣ ಎನ್ನುವುದು ಸಂಶೋಧನೆಗಳಿಂದ ದೃಢವಾಗಿದೆ. ಇದರ ನಡುವೆಯೇ ದೇಶದಲ್ಲಿ ಮತ್ತೊಂದು ರೂಪಾಂತರಿ ಕೊರೊನಾ ವೈರಸ್ ಕಂಡು ಬಂದಿದ್ದು, ಮೂರನೇ ಅಲೆಯ ಆತಂಕವನ್ನು ಮತ್ತಷ್ಟು ಹೆಚ್ಚು ಮಾಡಿದೆ.

ಡೆಲ್ಟಾ ಪ್ರಬೇಧದಿಂದ ರೂಪಾಂತರಗೊಂಡ ಹೊಸ ವೈರಸ್ AY.1 ಅಥವಾ ಡೆಲ್ಟಾ ಪ್ಲಸ್ ಎಂದು ಹೆಸರು. AY.1 ಪ್ರಬೇಧದ ವೈರಸ್ ಆ್ಯಂಟಿಬಾಡಿ ಕಾಕ್ ಟೈಲ್ಗೂ ಪ್ರತಿರೋಧ ತೋರುವ ಶಕ್ತಿ ಇದೆ ಎಂದು ಹೇಳಲಾಗಿದೆ.

ಯುಕೆ ಆರೋಗ್ಯ ಇಲಾಖೆ ಕೂಡ ಇದನ್ನು ಖಚಿತಪಡಿಸಿದೆ. ಆದರೆ ಭಾರತದಲ್ಲಿ ಈ ವೈರಸ್​​ ಹೆಚ್ಚಾಗಿ ಕಂಡು ಬಂದಿಲ್ಲ ಎಂದು ತಜ್ಞರು ಮಾಹಿತಿ ನೀಡಿದ್ದಾರೆ. ಇಂಗ್ಲೆಂಡ್​​ನಲ್ಲಿ ಹೊಸ ರೂಪಾಂತರಿ ವೈರಸ್​​ನ 36 ಪ್ರಕರಣಗಳು ಮಾತ್ರ ವರದಿಯಾಗಿದ್ದು, ಇದರಲ್ಲಿ ಇಬ್ಬರು ಮಾತ್ರ ಶ್ವಾಸಕೋಶದ ಸೋಂಕಿಗೆ ಒಳಗಾಗಿದ್ದಾರೆ. ಇನ್ನು ಹೆಚ್ಚಿನ ಪ್ರಕರಣಗಳು ನೇಪಾಳ, ಟರ್ಕಿ, ಮಲೇಷಿಯಾ ಹಾಗೂ ಸಿಂಗಾಪುರಕ್ಕೆ ಭೇಟಿ ಕೊಟ್ಟವರಲ್ಲಿ ರೂಪಾಂತರ ವೈರಸ್​ ಕಂಡು ಬಂದಿದೆ.

ದೆಹಲಿ ಮೂಲದ ಸಿಎಸ್‌ಐಆರ್-ಇನ್‌ಸ್ಟಿಟ್ಯೂಟ್ ಆಫ್ ಜೀನೋಮಿಕ್ಸ್ ಅಂಡ್ ಇಂಟಿಗ್ರೇಟಿವ್ ಬಯಾಲಜಿ (ಐಜಿಐಬಿ)ಯ ವಿಜ್ಞಾನಿ ವಿನೋದ್ ಸ್ಕರಿಯಾ ರೂಪಾಂತಿ ವೈರಸ್​ ಕುರಿತು ಟ್ವೀಟ್​ ಮಾಡಿ ಮಾಹಿತಿ ನೀಡಿದ್ದು, ಹೊಸ ರೂಪಾಂತರಿ ಕೊರೊನಾ ವೈರಸ್​​​​​​​​​​​ಗಳಲ್ಲಿ B.1.617.2.1 ಅನ್ನು AY.1 ಎಂದು ಕರೆಯಲಾಗುತ್ತದೆ. ಇದನ್ನು K417N ರೂಪಾಂತರಿಯಿಂದ ನಿರೂಪಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ.

The post ದೇಶದಲ್ಲಿ ಹೊಸ ರೂಪಾಂತರಿ ಕೊರೊನಾ ವೈರಸ್​ ಪತ್ತೆ-3ನೇ ಅಲೆಗೆ ಬಗ್ಗೆ ಮತ್ತಷ್ಟು ಆತಂಕ appeared first on News First Kannada.

Source: newsfirstlive.com

Source link