ದೇಶದಲ್ಲಿ 2,63,533 ಹೊಸ ಕೊರೊನಾ ಕೇಸ್​, ಒಂದೇ ದಿನ ಅತೀ ಹೆಚ್ಚು ಸೋಂಕಿತರ ಸಾವು

ದೇಶದಲ್ಲಿ 2,63,533 ಹೊಸ ಕೊರೊನಾ ಕೇಸ್​, ಒಂದೇ ದಿನ ಅತೀ ಹೆಚ್ಚು ಸೋಂಕಿತರ ಸಾವು

ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 2,67,334 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 4529 ಮಂದಿ ಮೃತಪಟ್ಟಿದ್ದಾರೆ. 3,89,851 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಪಾಸಿಟಿವ್ ಆದವರಿಗಿಂತ ಇಂದು ಡಿಸ್ಚಾರ್ಜ್ ಆದವರ ಸಂಖ್ಯೆ ಹೆಚ್ಚಿದೆ. ಹಾಗೇ ನಿನ್ನೆಗಿಂತ ಇಂದು ಹೊಸ ಕೊರೊನಾ ಕೇಸ್​​ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ. ಆದ್ರೆ ಇದೇ ಮೊದಲು ಒಂದೇ ದಿನ ಅತೀ ಹೆಚ್ಚು ಸಾವಿನ ಸಂಖ್ಯೆ ದಾಖಲಾಗಿದೆ.

ದೇಶದಲ್ಲಿ ಈವರೆಗೆ ಕೊರೊನಾ ಸೋಂಕಿಗೊಳಗಾದವರ ಒಟ್ಟು ಸಂಖ್ಯೆ 2,54,96,330 ಹಾಗೂ ಈವರೆಗೆ ಡಿಸ್ಚಾರ್ಜ್ ಆದವರ ಸಂಖ್ಯೆ 2,19,86,363. ಒಟ್ಟು 2,83,248 ಮಂದಿ ಈವರೆಗೆ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಸದ್ಯ 32,26,719 ಆ್ಯಕ್ಟಿವ್ ಕೇಸ್​ಗಳಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

ಕೊರೊನಾ ಅಂಕಿ-ಅಂಶಗಳು

  • ಒಟ್ಟು ಪ್ರಕರಣಗಳು- 2,54,96,330
  • ಒಟ್ಟು ಗುಣಮುಖರಾದವರು- 2,19,86,363
  • ಈವರೆಗೆ ಸೋಂಕಿನಿಂದ ಸಾವನ್ನಪ್ಪಿದವರು- 2,83,248
  • ಸಕ್ರಿಯ ಪ್ರಕರಣಗಳು-32,26,719
  • ಈವರೆಗೆ ವ್ಯಾಕ್ಸಿನ್ ಪಡೆದವರು-18,58,09,302

 

The post ದೇಶದಲ್ಲಿ 2,63,533 ಹೊಸ ಕೊರೊನಾ ಕೇಸ್​, ಒಂದೇ ದಿನ ಅತೀ ಹೆಚ್ಚು ಸೋಂಕಿತರ ಸಾವು appeared first on News First Kannada.

Source: newsfirstlive.com

Source link