ನವದೆಹಲಿ: ದೇಶದಲ್ಲಿ, ಕೊರೊನಾ ಅಬ್ಬರದ ನಡುವೆಯೇ ಬ್ಲಾಕ್​ ಫಂಗಸ್​ನ ಅಬ್ಬರ ಕೂಡ ಜೋರಾಗಿದೆ. ಕೊರೊನಾ ಸೋಂಕಿನಿಂದ ಗುಣವಾಗ್ತಾಯಿರೋರಲ್ಲಿ ಬ್ಲಾಕ್​ ಫಂಗಸ್​ ಕಾಣಿಸ್ತಾಯಿದ್ದು, ದಿನದಿಂದ ದಿನಕ್ಕೆ ಏರಿಕೆಯಾಗ್ತಲೇಯಿದೆ.

ಇದೀಗ, ದೇಶದಲ್ಲಿ 31 ಸಾವಿರದ 216 ಜನರಲ್ಲಿ ಬ್ಲಾಕ್​ ಫಂಗಸ್​ ಕಾಣಿಸಿಕೊಂಡಿದ್ದು, ಅದರಲ್ಲಿ 2 ಸಾವಿರದ 109 ಜನ ಬ್ಲಾಕ್​ ಫಂಗಸ್​ನಿಂದ ಸಾವನ್ನಪ್ಪಿದ್ದಾರೆ. ಇದೀಗ, ಕಳೆದ ಮೂರು ವಾರದಲ್ಲಿ ದೇಶದಲ್ಲಿ ಬ್ಲಾಕ್​ ಫಂಗಸ್​ ಶೇ.150ರಷ್ಟು ಏರಿಕೆಯಾಗಿದೆ. ಕೊರೊನಾ ಎರಡನೇ ಅಲೆಯ ಮಧ್ಯೆ ಇನ್​ಫೆಕ್ಷನ್ ಕೂಡ ಬೆಳಿತಾ ಹೋಗ್ತಿದೆ.

ಒಂದ್​ ಕಡೆ, ಫಂಗಸ್​ ಏರಿಕೆಯಾಗ್ತಾಯಿದ್ರೆ, ಮತ್ತೊಂದು ​ಕಡೆ ಅದಕ್ಕೆ ಕೊಡಬೇಕಾದ ಔಷಧಿ ಆ್ಯಂಫೋಟೆರಿಸಿನ್​ -ಬಿ ಪೂರೈಕೆ ಇದೀಗ ಶಾರ್ಟೇಜ್​ ಆಗಿದ್ದು, ಇನ್ನಷ್ಟು ತಲೆನೋವನ್ನ ಹೆಚ್ಚಿಸಿದೆ. ದೇಶದಲ್ಲಿ, ಬ್ಲಾಕ್ ​ಫಂಗಸ್​ನಿಂದ ಸಾವನ್ನಪ್ಪಿರೋರ ಸಂಖ್ಯೆಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದ್ರೆ, ಮಹಾರಾಷ್ಟ್ರ ಮೊದಲನೇ ಸ್ಥಾನದಲ್ಲಿದೆ. ಜಾರ್ಖಂಡ್​ನಲ್ಲಿ ಕಡಿಮೆ ಬ್ಲಾಕ್​ಫಂಗಸ್​ ಕೇಸ್​ ಇದ್ದು, ಪಶ್ಚಿಮ ಬಂಗಾಳದಲ್ಲಿ ಸಾವಿನ ಸಂಖ್ಯೆ ಕಡಿಯಿದೆ ಅಂತ ಆರೋಗ್ಯ ಸಚಿವಾಲಯ ತಿಳಿಸಿದೆ.

The post ದೇಶದಲ್ಲಿ 3 ವಾರದಲ್ಲಿ ಶೇ. 150ರಷ್ಟು ಬ್ಲಾಕ್ ​ಫಂಗಸ್​ ಕೇಸ್​ಗಳು ಏರಿಕೆ appeared first on News First Kannada.

Source: newsfirstlive.com

Source link